ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮತ್ತೆ ಇಬ್ಬರು ಕೊರೊನಾ ಶಂಕಿತರು ಪತ್ತೆ - ಕೊಡಗು ಕೊರೊನಾ ಸೋಂಕು ಶಂಕೆ

ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಮತ್ತಿಬ್ಬರನ್ನು ವಿಶೇಷ ಪ್ರತ್ಯೇಕ ವಾರ್ಡ್​​ಗೆ ದಾಖಲಿಸಲಾಗಿದ್ದು, ಶಂಕಿತರ ಗಂಟಲ ದ್ರವ, ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ.

Two Corona suspects found in kodagu
ಕೊಡಗಿನಲ್ಲಿ ಮತ್ತೆ ಇಬ್ಬರು ಕೊರೊನಾ ಶಂಕಿತರು ಪತ್ತೆ

By

Published : Mar 15, 2020, 7:43 PM IST

ಕೊಡಗು: ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಮತ್ತಿಬ್ಬರನ್ನು ವಿಶೇಷ ಪ್ರತ್ಯೇಕ ವಾರ್ಡ್‌ (ಐಸೋಲೇಶನ್ ವಾರ್ಡ್​​)ಗೆ ದಾಖಲಿಸಲಾಗಿದೆ. 12ರಂದು ಅರಬ್ ದೇಶದಿಂದ ಬಂದಿದ್ದ ದಂಪತಿಯನ್ನು ಪರಿಶೀಲಿಸಿದ್ದು, ಸೋಂಕು ತಗುಲಿರುವ ಶಂಕೆಯ ಮೇರೆಗೆ ಇಬ್ಬರನ್ನು ವೈದ್ಯರು ಐಸೋಲೇಶನ್ ವಾರ್ಡ್​ಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಕೊಡಗಿನಲ್ಲಿ ಮತ್ತೆ ಇಬ್ಬರು ಕೊರೊನಾ ಶಂಕಿತರು ಪತ್ತೆ

ಇದುವರೆಗೆ ಕೊಡಗಿನಲ್ಲಿ ಮೂವರು ಕೊರೊನಾ ಸೋಂಕಿನ ಶಂಕಿತರು ಪತ್ತೆಯಾಗಿದ್ದು, ಈಗಾಗಲೇ ದಂಪತಿಯ ಗಂಟಲ ದ್ರವ, ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಸೋಂಕು ತಗುಲಿರುವ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದರು ಎನ್ನುವ ಮಾಹಿತಿ ಮೇರೆಗೆ ಶಂಕಿತ ವ್ಯಕ್ತಿಯ ಕುಟುಂಬದ ಮೂವರನ್ನು ತಪಾಸಣೆ ನಡೆಸಲಾಗಿದೆ.

ABOUT THE AUTHOR

...view details