ಕರ್ನಾಟಕ

karnataka

ETV Bharat / state

ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಖದೀಮರ ಬಂಧನ - ಮಡಿಕೇರಿ ಹುಲಿ ಉಗುರು ಮಾರಾಟ ಪ್ರಕರಣ

ಅಕ್ರಮವಾಗಿ ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿಯಲ್ಲಿ ಬಂಧಿಸಲಾಗಿದೆ.

two-arrested-for-trying-to-sell-tiger-claws-in-madikeri
ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಖದೀಮರ ಬಂಧನ

By

Published : May 14, 2022, 9:15 PM IST

ಕೊಡಗು:ಅಕ್ರಮವಾಗಿ ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಸಿಬ್ಬಂದಿ ಬಂಧಿಸಿದ್ದಾರೆ. ಜಡೆಸ್ವಾಮಿ ಹಾಗೂ ರಾಮಚಂದ್ರ ಎಂಬುವವರೇ ಈ ಬಂಧಿತ ಆರೋಪಿಗಳಾಗಿದ್ದಾರೆ.

ಮಡಿಕೇರಿ ನಗರದ ಫೀ.ಮಾ ಕಾರ್ಯಪ್ಪ ವೃತ್ತದಲ್ಲಿ ಸಿದ್ದಾಪುರ ಕಡೆಗೆ ಹೋಗುವ ರಸ್ತೆ ಬದಿಯಲ್ಲಿರುವ ಬಸ್ ನಿಲ್ದಾಣದ ಬಳಿ ಇಬ್ಬರು 22 ಹುಲಿ ಉಗುರುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ಮಡಿಕೇರಿ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಖದೀಮರ ಬಂಧನ

22 ಉಗುರುಗಳ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಚರಣೆಯಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಸಿ.ಯು ಸವಿ ಹಾಗೂ ಸಿಬ್ಬಂದಿ ಇದ್ದರು.

ಇದನ್ನೂ ಓದಿ:ದೆಹಲಿಯ ಡೈರಿ ಫಾರ್ಮ್​ಗೆ ಬೆಂಕಿ ತಗುಲಿ 20 ಗೋವುಗಳ ಸಜೀವ ದಹನ

ABOUT THE AUTHOR

...view details