ಕರ್ನಾಟಕ

karnataka

ETV Bharat / state

ಸೂಪರ್​​ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೊಡಗಿನಲ್ಲೂ ಶುರುವಾಯ್ತು ಟ್ವಿಟ್ಟರ್​​ ಅಭಿಯಾನ - ಕೊಡಗು

ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುರುವಾಗಿದ್ದ ಅಭಿಯಾದನಂತೆ ಈಗ ಕೊಡಗಿನಲ್ಲೂ ಇಂತಹದ್ದೇ ಕೂಗು ಕೇಳಿಬಂದಿದೆ. ನಮಗೆ ಸೂಪರ್​ ಸ್ಪಷಾಲಿಟಿ​ ಆಸ್ಪತ್ರೆ ಬೇಕೆಂದು ಜನರು ಟ್ವಿಟ್ಟರ್​ ಅಭಿಯಾನ ಆರಂಭಿಸಿದ್ದಾರೆ. # WeNeedEmergencyHospitalInKodagu ಎಂದು ಬರೆದು ಸಿಎಂಗೆ ಟ್ಯಾಗ್​​ ಮಾಡಿದ್ದಾರೆ.

ಕೊಡಗಿನಲ್ಲಿ ಶುರುವಾಯ್ತು ಟ್ವಿಟರ್​ ಅಭಿಯಾನ

By

Published : Jun 13, 2019, 11:33 AM IST

Updated : Jun 13, 2019, 2:11 PM IST

ಕೊಡಗು: ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಜನರಿಂದ ಟ್ವಿಟ್ಟರ್​ ಮೂಲಕ ಅಭಿಯಾನ ಶುರುವಾಗಿದೆ.

ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಭಿಯಾನ ಶುರುವಾಗಿದ್ದು, ಐಶಾರಾಮಿ ರೆಸಾರ್ಟ್, ಹೋಮ್ಸ್ ಸ್ಟೇ ಇವೆ. ಆದರೆ ಸುಸಜ್ಜಿತ ಆಸ್ಪತ್ರೆ ಇಲ್ಲ. #WeNeedEmergencyHospitalInKodagu ಎಂದು ಬರೆದು ಸಿಎಂ‌ಗೆ ಟ್ಯಾಗ್ ಮಾಡುವ ಮೂಲಕ ಒತ್ತಡ ಹೇರುತ್ತಿದ್ದಾರೆ‌.

ಟ್ವಿಟರ್​ ಅಭಿಯಾನ

ಸಾವಿರಾರು ಮಂದಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೇ ಇರುವುದರಿಂದ ತುರ್ತು ಪರಿಸ್ಥಿತಿ ವೇಳೆ ತೊಂದರೆ ಅನುಭವಿಸುವಂತಾಗಿದೆ ಎಂದು ಟ್ವಿಟ್ಟರ್​​ ಮೂಲಕ ಜನ ಅಳಲು ತೋಡಿಕೊಂಡಿದ್ದಾರೆ.

Last Updated : Jun 13, 2019, 2:11 PM IST

ABOUT THE AUTHOR

...view details