ಕರ್ನಾಟಕ

karnataka

ETV Bharat / state

ರೀ ಬಿಲ್ಡ್ ಕೊಡಗು ಯೋಜನೆ ಮೂಲಕ ಸಂತ್ರಸ್ತರಿಗೆ ಮನೆಗಳ ಹಸ್ತಾಂತರ - Re build kodagu plane

ಪ್ರಾಕೃತಿಕ ವಿಕೋಪದಿಂದಾಗಿ ಮನೆ ಕಳೆದುಕೊಂಡ ಮಾದಾಪುರ, ಗರಗಂದೂರು ವ್ಯಾಪ್ತಿಯ 25 ಮಂದಿ ಸಂತ್ರಸ್ತರಿಗೆ ಅವರ ಜಾಗದಲ್ಲಿಯೇ ಹೊಸ ಮನೆ ನಿರ್ಮಾಣ ಮಾಡಿ ಸರಳ ರೀತಿಯಲ್ಲಿ ಹಸ್ತಾಂತರಿಸಲಾಯಿತು.

Breaking News

By

Published : May 11, 2020, 6:46 PM IST

ಕೊಡಗು:ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ರೀ ಬಿಲ್ಡ್‌ ಕೊಡಗು ಯೋಜನೆ ಮೂಲಕ 25 ಮನೆಗಳನ್ನು ಹಸ್ತಾಂತರಿಸಲಾಯಿತು.

ಇದುವರೆಗೆ ರೋಟರಿ ಸಂಸ್ಥೆ ವತಿಯಿಂದ 50 ಮನೆಗಳನ್ನು ಸಂತ್ರಸ್ತರಿಗೆ ನೀಡಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಪ್ರಥಮ ಹಂತವಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ 25 ಮನೆಗಳನ್ನು ನೀಡಲಾಗಿತ್ತು. ಇದೀಗ ಮಾದಾಪುರ, ಗರಗಂದೂರು ವ್ಯಾಪ್ತಿಯ 25 ಮಂದಿಗೆ ಅವರ ಜಾಗದಲ್ಲಿಯೇ ಹೊಸ ಮನೆ ನಿರ್ಮಾಣ ಮಾಡಿ ಭಾನುವಾರ ಸರಳ ರೀತಿಯಲ್ಲಿ ಹಸ್ತಾಂತರಿಸಲಾಯಿತು ಎಂದು ರೀ ಬಿಲ್ಡ್ ಯೋಜನಾ ಸಮಿತಿ ಅಧ್ಯಕ್ಷ ಡಾ. ರವಿ ಅಪ್ಪಾಜಿ ತಿಳಿಸಿದ್ದಾರೆ.

ಇದುವರೆಗೆ ವಿವಿಧ ರೋಟರಿ ಕ್ಲಬ್‌ಗಳು ನೀಡಿದ ಸಹಾಯಧನ ಬಳಸಿ 2.56 ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ರೋಟರಿ ಸಂಸ್ಥೆ ಮೂಲಕ ಹ್ಯಾಬಿಟೇಟ್ ಫಾರ್ ಹ್ಯೂಮ್ಯಾನಿಟಿ ಇಂಡಿಯಾ ಸಂಸ್ಥೆ ನಿರ್ಮಾಣ ಮಾಡಿದೆ. ಪ್ರತಿ ಮನೆಗೆ 5.5 ಲಕ್ಷ ರೂ. ವೆಚ್ಚವಾಗಿದೆ.

ಅಂತಾರಾಷ್ಟ್ಪೀಯ ರೋಟರಿ ಸಂಸ್ಥೆಯ ಪ್ರಮುಖರು ಹಾಗೂ ಭಾರತ ರೋಟರಿ ನಾಯಕರ ಬೆಂಬಲದೊಂದಿಗೆ ಈ ಯೋಜನೆ ಕಾರ್ಯಗತಗೊಂಡಿದೆ.‌ ಲಾಕ್‍ಡೌನ್ ನಿಯಮಗಳಂತೆ ಸಭಾ ಕಾರ್ಯಕ್ರಮ ಇಲ್ಲದೇ ಸರಳ ರೀತಿಯಲ್ಲಿ 25 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ABOUT THE AUTHOR

...view details