ವಿರಾಜಪೇಟೆ/ಕೊಡಗು: ಅಕ್ರಮವಾಗಿ ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದ ಹರಿಯಾಣ ಮೂಲದ ನಾಲ್ವರನ್ನು ಬಂಧಿಸುವಲ್ಲಿ ವಿರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ರಮವಾಗಿ ಎಮ್ಮೆಗಳ ಸಾಗಾಟ: ಹರಿಯಾಣ ಮೂಲದ ನಾಲ್ವರ ಬಂಧನ... - Four arrested for transporting buffalo Virajpet
ಅಕ್ರಮವಾಗಿ ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದ ಹರಿಯಾಣ ಮೂಲದ ನಾಲ್ವರನ್ನು ಬಂಧಿಸಲಾಗಿದೆ.
ಇರ್ಷಾದ್, ಸಹಾಬುದ್ದೀನ್, ಜಾಹಿದ್, ಮುಬೀನ್ ಬಂಧಿತರಾಗಿದ್ದು, ಈ ನಾಲ್ವರು ಹರಿಯಾಣ ಮೂಲದವರು ಎನ್ನಲಾಗಿದೆ. ಭಾನುವಾರ ವಿರಾಜಪೇಟೆಯ ಪೆರುಂಭಾಡಿಯ ಅಂತರರಾಜ್ಯ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ RJ_14_GK,4889 ಸಂಖ್ಯೆಯ ಲಾರಿಯು ವಾಹನವನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರು ಎನ್ನಲಾಗಿದೆ. ಇವರನ್ನು ಬೆನ್ನಟ್ಟಿದ ಪೇದೆಗಳಾದ ಮಧು ಟಿ.ಟಿ ಮತ್ತು ರಜನ್ ಸುಮಾರು ಐದು ಕಿಮೀ ವರೆಗೆ ಹಿಂಬಾಲಿಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಲಾರಿಯಲ್ಲಿ ಸುಮಾರು ಒಂದರಿಂದ ಎರಡು ವಯಸ್ಸಿನ ಮೂವತ್ತೈದು ಎಮ್ಮೆಗಳನ್ನು ಹರಿಯಾಣ ಹಾಗೂ ಉತ್ತರಪ್ರದೇಶದಿಂದ ಖರೀದಿಸಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.