ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಕಾಡು ಹಂದಿ ಮಾಂಸ ಸಾಗಣೆ: ಸೋಮವಾರಪೇಟೆ ಬಳಿ ಇಬ್ಬರು ಅರೆಸ್ಟ್​

ಕಾಡು ಪ್ರಾಣಿಗಳನ್ನು ಕೊಲ್ಲಬಾರದು ಎಂಬ ಕಾನೂನು ಇದ್ದರೂ ಸಹ ಮಾಂಸಕ್ಕಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಕೃತ್ಯ ಮಲೆನಾಡು ಭಾಗದಲ್ಲಿ ನಡೆಯುತ್ತಿದೆ. ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಕೊಡಗು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕಾಡು ಹಂದಿ ಮಾಂಸ ಸಾಗಾಣೆ

By

Published : Sep 24, 2019, 12:04 PM IST

ಮಡಿಕೇರಿ:ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಇಬ್ಬರು ಖದೀಮರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಬಳಿ ನಡೆದಿದೆ.

ಅಕ್ರಮವಾಗಿ ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಇಬ್ಬರು ಖದೀಮರ ಬಂಧನ

ಕಾಡು ಪ್ರಾಣಿಗಳನ್ನು ಕೊಲ್ಲಬಾರದು ಎಂಬ ಕಾನೂನು ಇದ್ದರೂ ಸಹ ಮಾಂಸಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುವ ಕೃತ್ಯ ಮಲೆನಾಡು ಭಾಗದಲ್ಲಿ ನಡೆಯುತ್ತಿದೆ. ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸೂರ್ಲಬ್ಬಿ ಗಣೇಶ್ ಹಾಗೂ ಕುಂಬಾರಗಡಿಗೆ ನಿವಾಸಿ ಸುಬ್ರಮಣಿ ಎಂಬುವರನ್ನು ಬಂಧಿಸಿದ್ದು, ಅವರಿಂದ ಕಾಡುಹಂದಿ ಮಾಂಸ, ಎರಡು ಬಂದೂಕು, ಕತ್ತಿ, ಒಂದು ಬೈಕ್‌ಅನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡು ಅರೋಪಿಗಳನ್ನು ಬಂಧಿಸಿದ್ದಾರೆ.

ABOUT THE AUTHOR

...view details