ಕೊಡಗು:ಸಿದ್ದರಾಮಯ್ಯಕಾರಿಗೆ ಮೊಟ್ಟೆ ಎಸೆತ ಪ್ರಕರಣದ ಗಲಾಟೆಯ ಕಾವು ನಂದಿಸಲು ಜಿಲ್ಲಾಡಳಿತ ಕೊಡಗಿನಲ್ಲಿ 144 ಸೆಕ್ಷನ್ ಜಾರಿ ಮಾಡಿತ್ತು. ಆದರೆ ಇದರಿಂದ ಜನಸಾಮಾನ್ಯರು, ವ್ಯಾಪಾರಸ್ಥರ ಬದುಕಿಗೆ ಹೊಡೆತ ಬಿದ್ದಿದೆ. ವ್ಯಾಪಾರಿಗಳಿಗೆ ವಾರದ ಆದಾಯ ಒಂದೇ ದಿನದಲ್ಲಿ ನಷ್ಟವಾಗಿದ್ದು ವಾರಪೂರ್ತಿ ಕಷ್ಟದಲ್ಲಿ ಬದುಕುವಂತಾಗಿದೆ.
ಕೊಡಗಿನ ಸಂತೆ, ಬೀದಿಬದಿ ವ್ಯಾಪಾರಸ್ಥರಿಗೆ ನಷ್ಟ ಇದನ್ನೂ ಓದಿ :ಕೊಡಗು ನಿಷೇಧಾಜ್ಞೆ ಹಿನ್ನೆಲೆ ಎಸ್ಪಿ ಕಚೇರಿಯಲ್ಲಿ ಐಜಿಪಿ ಸಭೆ
ಮಡಿಕೇರಿ ಸುತ್ತಮುತ್ತಲಿನಲ್ಲಿ ಬೆಟ್ಟಗುಡ್ಡಗಳಲ್ಲಿ ಗ್ರಾಮಿಣ ಪ್ರದೇಶದ ಜನರು ವಸ್ತುಗಳನ್ನು ಖರೀದಿಸಲು ಸಂತೆಯನ್ನೇ ಅವಲಂಬಿಸಿದ್ದಾರೆ. ಹಬ್ಬಕ್ಕೆ ವಸ್ತುಗಳನ್ನು ಖರೀದಿಸಬೇಕು. ಆದರೆ ಸಂತೆ ಇಲ್ಲದೆ ಯಾವ ವಸ್ತುಗಳನ್ನೂ ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಹಕರು ನೋವು.
"ನಾವು ಸಂಘಗಳಿಂದ ಸಾಲ ಪಡೆದಿರುತ್ತೇವೆ. ಸಂತೆಯಲ್ಲಿ ಬರುವ ಆದಾಯವೇ ಕುಟುಂಬಕ್ಕೆ ಮೂಲ. 144 ಸೆಕ್ಷನ್ ಇರುವುದರಿಂದ ಜನರು ಮಾರುಕಟ್ಟೆಗೆ ಬರಲು ಅಂಜುತ್ತಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿದೆ" ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ :ಕೊಡಗಿನಲ್ಲಿ ಆರದ ಮೊಟ್ಟೆ ಕಾವು..ಮಡಿಕೇರಿಯಲ್ಲಿ ಪೊಲೀಸರಿಂದ ಪಥಸಂಚಲನ