ಕೊಡಗು :ಇಷ್ಟು ದಿನ ಸಂಪೂರ್ಣ ಬಂದ್ ಆಗಿದ್ದ ಜಿಲ್ಲೆ ಇದೀಗ ಅನ್ಲಾಕ್ ಆಗಿದೆ. ಆದರೆ, ಪ್ರವಾಸಿ ತಾಣಗಳತ್ತ ಬರುತ್ತಿರುವ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ಊರಿನತ್ತ ಮರಳುತ್ತಿದ್ದಾರೆ.
ನೋ ಎಂಟ್ರಿ ಬೋರ್ಡ್ ನೋಡಿ ಜನರು ವಾಪಸ್ ಕೊಡಗಿನತ್ತ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಇಷ್ಟು ದಿನ ಕೋವಿಡ್ನಿಂದಾಗಿ ಮನೆಯಲ್ಲೇ ಕೂತು ಬೋರ್ ಆಗಿದ್ದ ಮಂದಿ ಕೊಡಗಿನತ್ತ ಬರುತ್ತಿದ್ದಾರೆ. ಕೊಡಗಿನ ಕಾವೇರಿ ನಿಸರ್ಗಧಾಮ, ಅಬ್ಬಿ ಫಾಲ್ಸ್ ಹೀಗೆ ನಾನಾ ಪ್ರವಾಸಿ ತಾಣಗಳಿಗೆ ಬರುತ್ತಿರುವ ಪ್ರವಾಸಿಗರು ಗೇಟ್ ಮುಂಭಾಗದಿಂದಲೇ ನೋ ಎಂಟ್ರಿ ಬೋರ್ಡ್ ನೋಡಿ ಹಿಂತಿರುಗುತ್ತಿದ್ದಾರೆ.
ಜಿಲ್ಲಾಡಳಿತದ ಈ ನಿರ್ಧಾರ ಒಂದಷ್ಟು ಮಂದಿಗೆ ಗೊಂದಲ ಉಂಟು ಮಾಡಿದೆ. ಜಿಲ್ಲಾಡಳಿತ ಈಗಾಗಲೇ ಪ್ರವಾಸಿಗರ ಆಗಮನಕ್ಕೆ ಅನುವು ಮಾಡಿ ಕೊಟ್ಟಿರೋದ್ರಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸುಮಾರು ಮೂರು ನಾಲ್ಕು ದಿನಗಳಿಗೆ ರೂಂ ಬುಕ್ಕಿಂಗ್ ಮಾಡಿರುವವರು ಕೂಡ ಒಂದೇ ದಿನಕ್ಕೆ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.
ಕೊಡಗಿನ ಟೂರಿಸ್ಟ್ ಜಾಗಗಳು ಬಂದ್ ಆಗಿರುವುದು ಪ್ರವಾಸಿಗರಿಗೆ ನಿರಾಶೆ ತಂದರೆ, ರೆಸಾರ್ಟ್ ಮತ್ತು ಹೋಂ ಸ್ಟೇ ಬಂದ್ ಆಗಿರುವುದು ಮಾಲೀಕರ ಹತಾಶೆಗೆ ಕಾರಣವಾಗಿದೆ. ಪ್ರವಾಸಿಗರು ಒಂದೇ ದಿನದಲ್ಲಿ ರೂಂ ಖಾಲಿ ಮಾಡುತ್ತಿರೋದು ಪ್ರವಾಸೋದ್ಯಮವನ್ನೇ ನಂಬಿರುವವರಿಗೆ ಬಹಳ ದೊಡ್ಡ ಹೊಡೆತ ನೀಡುತ್ತಿದೆ.