ವಿರಾಜಪೇಟೆ (ಕೊಡಗು): ಕಾಡು ಹಂದಿಯನ್ನು ಹಿಡಿಯಲು ಇಡಲಾದ ಬಲೆಗೆ ಹುಲಿಯೊಂದು ಬಿದ್ದಿರುವ ಘಟನೆ ದಕ್ಷಿಣ ಕೊಡಗಿನ ಬಾಳೆಲೆ ಪಶುವೈದ್ಯ ಆಸ್ಪತ್ರೆ ಕಟ್ಟದ ಸಮೀಪ ನಡೆದಿದೆ.
ಕಾಡು ಹಂದಿ ಸೆರೆಗಿಟ್ಟ ಬಲೆಗೆ ಬಿದ್ದ ಹುಲಿರಾಯ - tiger trapped in kodagu latest news
ಕಾಡುಹಂದಿ ಸೆರೆಹಿಡಿಯಲು ಇಟ್ಟಿದ್ದ ಬಲೆಯಲ್ಲಿ ಹುಲಿ ಸೆರೆಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ವ್ಯಾಪ್ತಿಯಲ್ಲಿ ನಡೆದಿದೆ.
ಬಲೆಗೆ ಬಿದ್ದ ಹುಲಿ
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅರಿವಳಿಕೆ ಮದ್ದು ನೀಡಿ ಹುಲಿ ಸೆರೆಗೆ ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನು, ಹುಲಿ ಬಲೆಗೆ ಬಿದ್ದಿರುವ ಸುದ್ದಿ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಸಹಜವಾಗಿ ಆತಂಕಕ್ಕೀಡಾಗಿದ್ದಾರೆ.