ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮುಂದುವರಿದ ವ್ಯಾಘ್ರನ ಅಟ್ಟಹಾಸ: ಮತ್ತೊಂದು ಹಸು ಬಲಿ - Tiger attacks in Kodagu

ಇಂದು ಮುಂಜಾನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಹಸುವೊಂದನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ.

Tiger Attacks on Cow at Kodagu
ಕೊಡಗಿನಲ್ಲಿ ಹುಲಿ ದಾಳಿಯಿಂದ ಮತ್ತೊಂದು ಹಸು ಸಾವು

By

Published : Mar 16, 2021, 9:15 AM IST

ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ ನಿರಂತರವಾಗಿ ಮುಂದುವರಿದಿದ್ದು, ಇಂದು ಮುಂಜಾನೆ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಹಸುವೊಂದನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ.

ಮೋಹನ್ ದಾಸ್ ಮೊಣ್ಣಪ್ಪ ಎಂಬುವವರಿಗೆ ಸೇರಿದ ಹಸುವನ್ನು ಹುಲಿ ಕೊಂದಿದೆ. ಈ ನರಭಕ್ಷಕ ವ್ಯಾಘ್ರ ಕಳೆದ ಒಂದು ತಿಂಗಳಲ್ಲಿ 10 ಹಸು ಮತ್ತು ಮೂರು ಜನರನ್ನು ಬಲಿ ಪಡೆದಿದ್ದು, ಹುಲಿ ದಾಳಿಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಓದಿ:ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ, ಕುಟುಂಬಸ್ಥರಿಗೆ ಆಕಸ್ಮಿಕ ಮರಣ ಎಂದು ನಂಬಿಸಿದ್ದ ಮಹಿಳೆ ಅರೆಸ್ಟ್​

ಇನ್ನು, ಪೊನ್ನಂಪೇಟೆ ಭಾಗದಲ್ಲಿ ಹುಲಿ ಸೆರೆಗಾಗಿ 150ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ 5 ಸಾಕಾನೆಗಳಿಂದ ಶೋಧ ಕಾರ್ಯ ನಡೆಸುತ್ತಿದ್ದು, ರಾತ್ರಿ ವೇಳೆ ಗಸ್ತು ಪ್ರಾರಂಭಿಸಿದ್ದಾರೆ. ಜೊತೆಗೆ ನೂತನವಾಗಿ 3 ಶಾರ್ಪ್ ಸೂಟರ್​ಗಳನ್ನು ನಿಯೋಜನೆ ಕೂಡಾ ಮಾಡಲಾಗಿದೆ. ಆದರೂ ನರಭಕ್ಷಕ ಹುಲಿ ಬೋನಿಗೆ ಬೀಳುತ್ತಿಲ್ಲ.

ABOUT THE AUTHOR

...view details