ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ.. 3 ಹಸುಗಳನ್ನ ಬಲಿ ಪಡೆದ ಹುಲಿರಾಯ - Tiger attack

ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ತತ್ತರಿಸಿದೆ. ವ್ಯಾಘ್ರನ ಹಾವಳಿಯಿಂದ ದಕ್ಷಿಣ ಕೊಡಗಿನ ಜನ ಬೇಸತ್ತಿದ್ದಾರೆ. ನಿನ್ನೆ ಒಂದೇ ದಿನ ಎರಡು ಕಡೆ ವ್ಯಾಘ್ರ ದಾಳಿ ನಡೆಸಿದ್ದು, ಈವರೆಗೆ ಮೂರು ಹಸುಗಳು ಬಲಿಯಾಗಿವೆ.

Tiger attacks in Kodagu: 3 cow died
ಕೊಡಗಿನಲ್ಲಿ ವ್ಯಾಘ್ರನ ಹಾವಳಿ....ಬಲಿಯಾಯಿತು 3 ಹಸುಗಳು

By

Published : May 1, 2020, 1:33 PM IST

ವಿರಾಜಪೇಟೆ :ಒಂದೆಡೆ ಕೊರೊನಾ ಆರ್ಭಟ, ಮತ್ತೊಂದೆಡೆ ವ್ಯಾಘ್ರನ ಹಾವಳಿಯಿಂದ ದಕ್ಷಿಣ ಕೊಡಗಿನ ಜನರು ಕಂಗೆಟ್ಟಿದ್ದಾರೆ.

ಕೊಡಗಿನಲ್ಲಿ ವ್ಯಾಘ್ರನ ಹಾವಳಿ.. 3 ಹಸುಗಳು ಬಲಿ

ನಿನ್ನೆ ರಾತ್ರಿ ಕುಮಟೂರು ಗ್ರಾಮದ ಮಾಚಿರ ಮುತ್ತಮ್ಮನವರ ಹಸುವೊಂದು ಹುಲಿ ದಾಳಿಗೆ ಬಲಿಯಾಗಿದೆ. ಈ ಮೊದಲು ಇದೇ ಹಸುವಿನ ಕರುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಅದೇ ಊರಿನ ಕೊಟ್ರಂಗಡ ಎಂ ಸುಗುಣ ಚಿನ್ನಪ್ಪನವರ ಹಸುವನ್ನು ಕೂಡಾ ನಿನ್ನೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಕುರಿತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ABOUT THE AUTHOR

...view details