ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಹಸು ಬಲಿ ಪಡೆದ ವ್ಯಾಘ್ರ - Tiger attack on cow

ಕೊಡಗಿನ ಪೊನ್ನಂಪೇಟೆ ತಾಲೂಕಿನಲ್ಲಿ ಹುಲಿ ದಾಳಿ ಮಾಡಿ ಹಸುವೊಂದನ್ನು ಕೊಂದು ಹಾಕಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

Tiger attack on cow in kodagu
ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ..ಬೆಕ್ಕೆಸೊಡ್ಲೂರಿನಲ್ಲಿ ಹಸು ಬಲಿ ಪಡೆದ ಹುಲಿರಾಯ

By

Published : Dec 9, 2020, 4:37 PM IST

ಪೊನ್ನಂಪೇಟೆ (ಕೊಡಗು):ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರಿನಲ್ಲಿ ಮನೆ ಮುಂದೆ ಕಟ್ಟಿದ್ದ ಹಸುವೊಂದನ್ನು ವ್ಯಾಘ್ರ ಬಲಿ ಪಡೆದಿದೆ.

ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ

ಬೆಕ್ಕೆಸೊಡ್ಲೂರು ಗ್ರಾಮದ ದೇವಯ್ಯ ಎಂಬುವವರು ಮಂಗಳವಾರ ರಾತ್ರಿ ಎಂದಿನಂತೆ ತಮ್ಮ ಮನೆ ಮುಂದೆ ಹಸು ಕಟ್ಟಿ ಹಾಕಿದ್ದರು. ಈ ವೇಳೆ ದಾಳಿ ನಡೆಸಿದ ಹುಲಿ, ಹಸುವನ್ನು ಕೊಂದು ಹಾಕಿದೆ.

ಇದನ್ನೂ ಓದಿ:ಹಲವು ಭಾಗ್ಯಗಳಿಗೆ ‘ಸಿದ್ದರಾಮನ ಹುಂಡಿ’ಯಿಂದ ಹಣ ತಂದಿದ್ರಾ?: ಹೆಚ್​ಡಿಕೆ

ಕಳೆದೊಂದು ವಾರದಿಂದ ಹಸುಗಳ ಮೇಲೆ ಹುಲಿ ದಾಳಿಯಿಂದ ಸ್ಥಳೀಯರು ಆತಂಕ್ಕೊಳಗಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ABOUT THE AUTHOR

...view details