ಕರ್ನಾಟಕ

karnataka

ETV Bharat / state

ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ದಾಳಿ: ಚಿಕ್ಕಮುಂಡೂರುನಲ್ಲಿ ಹಸು ಬಲಿ ಪಡೆದ ವ್ಯಾಘ್ರ - ಚಿಕ್ಕಮುಂಡೂರು ಹುಲಿ ದಾಳಿ

ಕೊಡಗಿನ ವಿರಾಜಪೇಟೆ ತಾಲೂಕಿನಲ್ಲಿ ಹುಲಿ ದಾಳಿ ಮಾಡಿ ಹಸುವೊಂದನ್ನು ಕೊಂದು ಹಾಕಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳೆದ 5 ದಿನಗಳ ಹಿಂದೆಯಷ್ಟೇ ಹುದಿಕೇರಿ ಸಮೀಪದ ಬೆಳ್ಳೂರಿನಲ್ಲಿ ಹುಲಿಯೊಂದನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ಸದ್ಯ ಮತ್ತೊಂದು ಪ್ರಕರಣ ಬೆಳಕಿದೆ ಬಂದಿದ್ದು, ಜನರಲ್ಲಿ ಭಯ ಶುರುವಾಗಿದೆ.

tiger-attack-in-kodagu-district
ಹುಲಿ ದಾಳಿ

By

Published : May 25, 2020, 10:17 AM IST

ವಿರಾಜಪೇಟೆ/ಕೊಡಗು:ತಾಲೂಕಿನ ಪೊನ್ನಂಪೇಟೆ ಸಮೀಪದ ಚಿಕ್ಕಮುಂಡೂರುನಲ್ಲಿ ಕಳೆದ ರಾತ್ರಿ ಕೊಟ್ಟಿಗೆಗೆ ನುಗ್ಗಿದ ಹುಲಿ, ಹಸುವೊಂದನ್ನು ಕೊಂದು ಹಾಕಿರುವ ಘಟನೆ ನಡೆದಿದೆ.

ಚಿಕ್ಕಮುಂಡೂರಿನ ನಿವೃತ್ತ ಪೋಸ್ಟ್ ಮಾಸ್ಟರ್ ಕಳ್ಳಿಚಂಡ ಜಗದೀಶ್ (ರಘು) ಎಂಬುವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಇದರಿಂದಾಗಿ ದಕ್ಷಿಣ ಕೊಡಗಿನಲ್ಲಿ ಇತ್ತೀಚೆಗೆ ಸಾಮಾನ್ಯವಾಗಿರುವ ವ್ಯಾಘ್ರನ ಅಟ್ಟಹಾಸ ಮತ್ತೆ ಮುಂದುವರೆದಂತಾಗಿದೆ.

ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ದಾಳಿ

5 ದಿನಗಳ ಹಿಂದೆ ಹುದಿಕೇರಿ ಸಮೀಪದ ಬೆಳ್ಳೂರಿನಲ್ಲಿ ಹುಲಿಯೊಂದನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ನಡಿಕೇರಿ ಚಿಕ್ಕಮುಂಡೂರು, ತೂಚಮಕೇರಿ, ಟಿ. ಶೆಟ್ಟಿಗೇರಿ ಮೊದಲಾದ ಪ್ರದೇಶದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದ್ದ ಹುಲಿ ಸೆರೆಯಾಗಿದೆ ಎಂದು ನಂಬಿ ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮತ್ತೆ ಹುಲಿ ದಾಳಿಯ ಘಟನೆ ಬೆಳಕಿಗೆ ಬಂದಿದ್ದು, ಜನರಲ್ಲಿ ಆತಂಕ ಶುರುವಾಗಿದೆ.

ABOUT THE AUTHOR

...view details