ಸಿದ್ಧಾಪುರ/ಕೊಡಗು: ತಮಿಳುನಾಡು ಹಾಗೂ ಕೇರಳದಿಂದ ಬಂದವರನ್ನು ಮಾಲ್ದಾರೆ ಸಮೀಪದ ಚೆನ್ನಂಗಿ ಬಸವನಳ್ಳಿ ಹಾಡಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ತಮಿಳುನಾಡು, ಕೇರಳದಿಂದ ಬಂದ 13 ಜನ: ಗಿರಿಜನ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್ - tribal ashram school
ತಮಿಳುನಾಡು ಮತ್ತು ಕೇರಳದಿಂದ ಬಂದ 13 ಜನರನ್ನು ಕೊಡಗಿನ ಸಿದ್ದಾಪುರದ ಚೆನ್ನಂಗಿ ಬಸವನಳ್ಳಿ ಹಾಡಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಹಾಡಿಯಲ್ಲಿ ಕ್ವಾರಂಟೈನ್ ಮಾಡಿರುವುದಕ್ಕೆ ಹಾಡಿ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊರ ರಾಜ್ಯದಿಂದ ಬಂದವರನ್ನು ಹಾಡಿಯಲ್ಲಿ ಕ್ವಾರಂಟೈನ್ ಮಾಡಿರುವುದಕ್ಕೆ ಹಾಡಿ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊರ ರಾಜ್ಯದಿಂದ ಬಂದವರನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರ ಕ್ವಾರಂಟೈನ್ ಮಾಡುವಂತೆ ದಿಡ್ಡಳ್ಳಿ ಹೋರಾಟಗಾರ್ತಿ ಮುತ್ತಮ್ಮ ಆಗ್ರಹಿಸಿದ್ದಾರೆ. ತಮಿಳುನಾಡಿನ 4 ಜನ, ಕೆರಳದ 9 ಮಂದಿಯನ್ನ ಕ್ವಾರಂಟೈನ್ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಐದು ಜನರನ್ನು ಒಂದೇ ಕೊಠಡಿಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಮೊಬೈಲ್ ಸಂಪರ್ಕ ಸಿಗದೆ ಇರುವುದರಿಂದ ಕುಟುಂಬಸ್ಥರು ಸಿದ್ಧಾಪುರ ವ್ಯಾಪ್ತಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಕಿರಿಯ ಆರೋಗ್ಯ ನಿರೀಕ್ಷಕ ಸುದರ್ಶನ್ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.