ಕರ್ನಾಟಕ

karnataka

ETV Bharat / state

ಕಳ್ಳತನ ಮಾಡಿ ಮಾಂಸಕ್ಕಾಗಿ ಹಸುವನ್ನೇ ಹತ್ಯೆ ಮಾಡಿದ ದುರುಳರು..! - ಕೊಡಗು ಲೇಟೆಸ್ಟ್ ಸುದ್ದಿ

ಕೊಟ್ಟಿಗೆಯಲ್ಲಿ‌ ಕಟ್ಟಿದ್ದ ಹಸು ಕಳ್ಳತನ ಮಾಡಿ, ಕೊಂದು ಮಾಂಸವನ್ನು‌ ಮಾತ್ರ ತೆಗೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.

cow
cow

By

Published : May 13, 2021, 10:48 PM IST

ಕೊಡಗು: ಕೊಟ್ಟಿಗೆಯಲ್ಲಿ‌ ಕಟ್ಟಿದ್ದ ಹಸು ಕಳ್ಳತನ ಮಾಡಿ, ಕೊಂದು ಮಾಂಸವನ್ನು‌ ಮಾತ್ರ ತೆಗೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡ ಆಳುವಾರ ಗ್ರಾಮದಲ್ಲಿ ನಡೆದಿದೆ.
ಗ್ರಾಮ ದಿನೇಶ್ ಎಂಬುವರಿಗೆ ಸೇರಿದ 50 ಸಾವಿರ ರೂ. ಬೆಲೆಬಾಳುವ ಹಸು ಕದ್ದಿರುವ ದುರುಳಲು ತೋಟಕ್ಕೆ ಎಳೆದುಕೊಂಡು ಹೋಗಿ, ಕೊಂದು ಮಾಂಸ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:ಹಗಲು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

ಕಾರು ಮತ್ತು ಬೈಕ್​ನಲ್ಲಿ ಬಂದು ಈ ದುಷ್ಕೃತ್ಯವೆಸಗಿದ್ದಾರೆ ಎನ್ನಲಾಗ್ತಿದೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details