ಕೊಡಗು :ದೇವಾಲಯದ ಗರ್ಭಗುಡಿ ಧ್ವಂಸ ಮಾಡಿ, ದೇವರ ವಿಗ್ರಹ ಭಗ್ನಗೊಳಿಸಿ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ಅತ್ತೂರಿನಲ್ಲಿ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಅತ್ತೂರು ಗ್ರಾಮದ ಶ್ರೀ ಮಾರಮ್ಮ ದೇಗುಲದಲ್ಲಿ ಘಟನೆ ನಡೆದಿದೆ. ಗ್ರಾಮದ ಹಿಂದೂಗಳು ಆರಾಧಿಸುತ್ತಿದ್ದ ಗ್ರಾಮ ದೇವತೆ ಮಾರಮ್ಮ ದೇವಿಯಾಗಿದ್ದು, ಘಟನೆ ಊರ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಡಗು: ದೇಗುಲದ ಗರ್ಭಗುಡಿ ಹಾನಿಗೊಳಿಸಿ ಮಾಂಗಲ್ಯ ಸರ ಕಳ್ಳತನ - target for pro Hindu organizations
ಕುಶಾಲನಗರ ತಾಲ್ಲೂಕಿನ ದೇಗುಲದಲ್ಲಿ ಕಳ್ಳತನ ಪ್ರಕರಣ ನಡೆದಿದ್ದು, ಭಜರಂಗ ದಳ ಆಕ್ರೋಶ ವ್ಯಕ್ತಪಡಿಸಿದೆ.
ಮಾರಮ್ಮ ದೇವರ ಗರ್ಭಗುಡಿ ಒಡೆದು ಮಾಂಗಲ್ಯ ಸರ ಕಳ್ಳತನ
ದುಷ್ಕೃತ್ಯ ಕೃತ್ಯವನ್ನು ಕುಶಾಲನಗರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಖಂಡಿಸಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಭಜರಂಗದಳ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ. ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ನೆಲಮಂಗಲದ ಎರಡು ದೇವಾಲಯಗಳಲ್ಲಿ ಕಳವು: ಲಕ್ಷಾಂತರ ರೂ ದೋಚಿ ಖದೀಮರು ಎಸ್ಕೇಪ್