ಮಡಿಕೇರಿ:ನಗರದ ಮನೆಯೊಂದರಲ್ಲಿ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡಿಕೇರಿ: ಕಳ್ಳನ ಬಂಧನ, ನಗದು-ಚಿನ್ನಾಭರಣ ವಶ - ಮಡಿಕೇರಿ ಸುದ್ದಿ
ನಗರದಲ್ಲಿ ಕಳ್ಳತನ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
![ಮಡಿಕೇರಿ: ಕಳ್ಳನ ಬಂಧನ, ನಗದು-ಚಿನ್ನಾಭರಣ ವಶ Theft arrest](https://etvbharatimages.akamaized.net/etvbharat/prod-images/768-512-03:04-kn-kdg-01-06-20-arrested-av-7207093-06062020150224-0606f-1591435944-622.jpg)
ಜೂ. 4ರಂದು ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿಯ ಪಿಡಬ್ಲ್ಯೂಡಿ ವಸತಿ ಗೃಹದಲ್ಲಿ ವಾಸವಾಗಿರುವ ಎನ್.ಅರುಣ್ ಕುಮಾರ್ ಎಂಬುವವರ ವಸತಿ ಗೃಹದ ಒಳಗೆ ಯಾರೋ ಕಳ್ಳರು ನುಗ್ಗಿ ಬೀರುವಿನ ಸೇಫ್ಟಿ ಲಾಕರ್ನಲ್ಲಿಟ್ಟಿದ್ದ 4,50,000 ರೂ. ನಗದು ಹಾಗೂ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಮಡಿಕೇರಿ ನಗರ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಆರೋಪಿ ಮಂಡ್ಯ ಜಿಲ್ಲೆಯ ಸಂತೋಷ್ ಕುಮಾರ್ನನ್ನು ಕಳ್ಳತನವಾದ ಕೆಲವೇ ಗಂಟೆಗಳಲ್ಲಿ ಬಂಧಿಸಿ ಕಳ್ಳತನವಾಗಿದ್ದ ಒಟ್ಟು 4,50,000 ರೂಪಾಯಿ ನಗದು ಹಣ ಹಾಗೂ 2,70,000 ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.