ಕೊಡಗು:ಕಾಫಿ ತೋಟದಲ್ಲಿ ಮರಗಸಿ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ಕಾರ್ಮಿಕ ಸಾವು - ಕೊಡಗು ಅಪರಾಧ ಸುದ್ದಿ
ಕಾಫಿ ತೋಟದಲ್ಲಿ ಮರಗಸಿ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ.
ಕಾರ್ಮಿಕ ಸಾವು
ಬರಡಿ ಗ್ರಾಮದ ಕಾರ್ಮಿಕ ರಾಜನ್ (45) ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅತ್ತಿಮಂಗಲ ಎಸ್ಟೇಟ್‌ನ ತೋಟದಲ್ಲಿ ಮರಗಸಿ ಮಾಡುತ್ತಿದ್ದಾಗ ಏಣಿಗೆ 11 ಕೆ.ವಿ ಸಾಮರ್ಥ್ಯದ ವಿದ್ಯುತ್ ಪ್ರವಹಿಸಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಜಿಲ್ಲಾಡಳಿತ ಇದಕ್ಕೆ ಸಂಬಂಧಿಸಿದಂತೆ ಕಬ್ಬಿಣದ ಏಣಿಗಳನ್ನು ಬಳಸುವ ಬದಲು ಪ್ಲಾಸ್ಟಿಕ್ ಹಾಗೂ ಫೈಬರ್ ಲ್ಯಾಡರ್‌ಗಳನ್ನು ಬಳಸುವಂತೆ ಸೂಚನೆ ನೀಡಿದ್ದರೂ ಅವುಗಳನ್ನು ಪಾಲಿಸುವಲ್ಲಿ ಕಾರ್ಮಿಕರು ಮತ್ತು ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ.