ಕೊಡಗು : ಲಘು ಭೂಕಂಪನದ ಅನುಭವದಿಂದ ಕಂಗಾಲಾಗಿರುವ ಜಿಲ್ಲೆಯ ಜನತೆಗೆ ಈಗ ಮತ್ತೊಂದು ಆಘಾತ ಉಂಟಾಗಿದೆ. ಭಾರಿ ಗಾತ್ರದ ಬಂಡೆ ಕಲ್ಲು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿರುವ ಘಟನೆ ಜಿಲ್ಲೆಯ ಕರಿಕೆಯ ಕುಂಡತ್ತಿಕಾನ ಗ್ರಾಮದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆ ಮಾಲೀಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ಕರಿಕೆ ನಿವಾಸಿ ಜಾನಕಿ ಎಂಬುವರ ಮನೆ ಮೇಲೆ ರಾತ್ರಿ ವೇಳೆ ಬಂಡೆಕಲ್ಲು ಉರುಳಿ ಬಿದ್ದಿದೆ. ರಾತ್ರಿ ಮನೆ ವೇಲೆ ಬಂಡೆ ಬಿದ್ದಿದ್ದು, ಮನೆಯ ಮಾಲೀಕರು ಇನ್ನೊಂದು ಕೊಠಡಿಯಲ್ಲಿ ಮಲಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಜೂನ್ 26 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕರಿಕೆ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಭೂಮಿ ಕಂಪನವಾಗುತ್ತಿದ್ದು, ಬಂಡೆ ಸಡಿಲಗೊಂಡು ರಾತ್ರಿ ಸಮಯದಲ್ಲಿ ಉರುಳಿ ಬಿದ್ದಿರಬಹುದೆಂದು ಸ್ಥಳೀಯರು ಹೇಳಿದ್ದಾರೆ.