ಕೊಡಗು: ಜಿಲ್ಲೆಯಲ್ಲಿ ವೈದ್ಯರೊಬ್ಬರು ಅನುಮತಿ ಇಲ್ಲದೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ.
ಅನುಮತಿ ಇಲ್ಲದೆ ನಡೆಯುತ್ತಿದೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ.! ಕೃಷ್ಣ ಎಂಬವರು ನಾಪೋಕ್ಲು ಬಳಿಯ ಕಕ್ಕಬೆಯನಲ್ಲಿ ಅನುಮತಿಯಿಲ್ಲದೇ ಪ್ರಥಮ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದಾರೆ. ಭಾರತೀಯ ನೌಕಾ ಸೇನೆಯಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಕೃಷ್ಣ, ಕಳೆದ ಎರಡು ವರ್ಷದಿಂದ ನಾಪೋಕ್ಲುವಿನಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದಾರೆ.
ಕೇಂದ್ರ ನಡೆಸಲು ವೈದ್ಯಕೀಯ ಇಲಾಖೆಯ ಅನುಮತಿ ಪಡೆದುಕೊಂಡಿಲ್ಲ ಅನ್ನೋದು ಕೆಲವರ ಆರೋಪ. ಗಾಮದ ಬಹುತೇಕ ಮಂದಿ ವೈದ್ಯ ಕೃಷ್ಣರ ಪರ ಮಾತಾಡುತ್ತಿದ್ದಾರೆ. ಎರಡು ವರ್ಷದಿಂದ ಚಿಕಿತ್ಸೆ ಕೊಡುತ್ತಿದ್ದಾರೆ. ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ ಅಂತಿದ್ದಾರೆ ಜನ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯ ಕೃಷ್ಣ, ನಾನು ನೌಕಾಸೇನೆಯಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೇನೆ. ಅಲ್ಲಿನ ಅನುಭವದ ಮೇಲೆ ಈಗ ಇಲ್ಲಿ ಪ್ರಥಮ ಚಿಕಿತ್ಸೆ ಮಾತ್ರ ನೀಡ್ತಿದ್ದೇನೆ ಅಂತ ಹೇಳ್ತಿದ್ದಾರೆ.