ವಿರಾಜಪೇಟೆ(ಕೊಡಗು): ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಗೆ ಪಿಎಫ್ಐ ಸಂಘಟನೆಯ ಸ್ವಯಂ ಸೇವಕರು ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ ಅಂತ್ಯ ಸಂಸ್ಕಾರ ಮಾಡಿದ ಪಿಎಫ್ಐ ಸಂಘಟನೆ - coronavirus updates
ಸಾವಿನ ಬಳಿಕ ಪ್ರತಿಯೊಂದು ಮೃತದೇಹಕ್ಕೂ ಗೌರವಯುತ ಅಂತ್ಯ ಸಂಸ್ಕಾರ ನಡೆಸಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಹಾಗೂ ಅಪೇಕ್ಷೆ. ಆದರೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ನಡೆಸಿಕೊಂಡ ಕೆಲವು ಘಟನೆಗಳ ಬಳಿಕ ಸಂಘಟನೆಗಳ ಸ್ವಯಂ ಸೇವಕರು ಆಯಾ ಧರ್ಮಗಳ ವಿಧಿ-ವಿಧಾನಗಳಂತೆ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
![ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ ಅಂತ್ಯ ಸಂಸ್ಕಾರ ಮಾಡಿದ ಪಿಎಫ್ಐ ಸಂಘಟನೆ The PFI organization buried the dead person from Corona ಕೊರೊನಾದಿಂದ ಮೃತಪಟ್ಟ ವ್ಯಕ್ತಿ ಅಂತ್ಯ ಸಂಸ್ಕಾರ](https://etvbharatimages.akamaized.net/etvbharat/prod-images/768-512-8191549-818-8191549-1595848202171.jpg)
ಕೋವಿಡ್‌ನಿಂದ ನಿನ್ನೆ ಮೃತಪಟ್ಟಿದ್ದ ವ್ಯಕ್ತಿಯನ್ನು ಆತನ ಸಂಪ್ರದಾಯದಂತೆ ಪಿಎಫ್ಐ ಕಾರ್ಯಕರ್ಯರು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಮೃತ ಸಹೋದರನ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಶಿಸ್ತಿನಿಂದ ಮೃತದೇಹವನ್ನು ಗುಂಡಿಗೆ ಇಟ್ಟ ಸ್ವಯಂ ಸೇವಕರು, ಜಿಲ್ಲಾಡಳಿತ ನೀಡಿರುವ ಕೆಲವು ಮಾರ್ಗದರ್ಶನದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಸಾವಿನ ಬಳಿಕ ಪ್ರತಿಯೊಂದು ಮೃತದೇಹಕ್ಕೂ ಗೌರವಯುತ ಅಂತ್ಯ ಸಂಸ್ಕಾರ ನಡೆಸಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಹಾಗೂ ಅಪೇಕ್ಷೆ. ಆದರೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ನಡೆಸಿಕೊಂಡ ಕೆಲವು ಘಟನೆಗಳ ಬಳಿಕ ಸಂಘಟನೆಗಳ ಸ್ವಯಂ ಸೇವಕರು ಆಯಾ ಧರ್ಮಗಳ ವಿಧಿ-ವಿಧಾನಗಳಂತೆ ಅಂತ್ಯ ಸಂಸ್ಕಾರ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.