ಕರ್ನಾಟಕ

karnataka

ETV Bharat / state

ಕೊರೊನಾ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದ ಕೊಡಗು ಜಿಲ್ಲಾಡಳಿತ - The Kodagu district was successful in controlling Corona

ಕೊಡಗಿನಲ್ಲಿ ಕೊರೊನಾ ಪ್ರಕರಣಗಳ ಶೇಕಡವಾರು ಸಂಖ್ಯೆ 18ಕ್ಕೆ ಏರಿತ್ತು. ಸಾವನ್ನಪ್ಪುವವರ ಸಂಖ್ಯೆ ಶೇಕಡವಾರು 2ರಷ್ಟಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೊನೆಗೂ ಕೊರೊನಾ ವೈರಸ್ ಹರಡುವುದಕ್ಕೆ ಬ್ರೇಕ್ ಹಾಕಲು ಸಾಕಷ್ಟ ಶ್ರಮಿಸಿದೆ.‌.

Kodagu
ಕೊಡಗು

By

Published : Oct 27, 2020, 7:15 PM IST

ಕೊಡಗು:ಕಳೆದ ಮೂರು ವಾರಗಳಿಂದ ಪ್ರತಿನಿತ್ಯ ನೂರರ ಗಡಿ ದಾಟುತಿದ್ದ ಕೋವಿಡ್ ಮಹಾಮಾರಿ ಕೊಡಗು ಜಿಲ್ಲೆಗೆ ಮರ್ಮಘಾತವನ್ನೇ ನೀಡಿತ್ತು. ಅಷ್ಟೇ ಅಲ್ಲ, ಪ್ರತಿ ನಿತ್ಯ ಇಬ್ಬರು ಕೊರೊನಾಗೆ ಬಲಿಯಾಗುತ್ತಿದ್ದರು. ಇದರಿಂದ ಎಚ್ಚೆತ್ತ ಕೊಡಗು ಜಿಲ್ಲಾಡಳಿತ ನಾಗಾಲೋಟದಲ್ಲಿ ಓಡುತ್ತಿದ್ದ ಕೊರೊನಾಗೆ ಬ್ರೇಕ್ ಹಾಕಿದೆ.

ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನಕ್ಕೆ 130 ರಿಂದ 135ರ ಗಡಿ ದಾಟುತ್ತಿತ್ತು. ಅಷ್ಟೇ ಅಲ್ಲ, ಅಕ್ಟೋಬರ್ 16ರಂದು ಬರೋಬ್ಬರಿ 137 ಜನರಿಗೆ ಕೊರೊನಾ ಮಹಾಮಾರಿ ವಕ್ಕರಿಸಿತ್ತು.‌

ಮಾರ್ಚ್ ತಿಂಗಳಲ್ಲಿ ಒಂದೆರಡು ಪ್ರಕರಣಗಳಿದ್ದ ಕೊಡಗಿನಲ್ಲಿ ಆಗಸ್ಟ್ ಕೊನೆಯಲ್ಲಿ 2,500 ಪ್ರಕರಣಗಳಾಗಿದ್ದವು. ಇನ್ನು ಅಕ್ಟೋಬರ್ 16 ಎನ್ನುವಷ್ಟರಲ್ಲಿ ಅಂದರೆ ಒಂದುವರೆ ತಿಂಗಳಲ್ಲಿ ಬರೋಬ್ಬರಿ 2,000 ಪ್ರಕರಣ ದಾಖಲಾಗಿ ಕೊಡಗಿನಲ್ಲಿ ಕೊರೊನಾ ಪ್ರಕರಣಗಳ ಶೇಕಡವಾರು ಸಂಖ್ಯೆ 18ಕ್ಕೆ ಏರಿತ್ತು. ಸಾವನ್ನಪ್ಪುವವರ ಸಂಖ್ಯೆ ಶೇಕಡವಾರು 2ರಷ್ಟಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೊನೆಗೂ ಕೊರೊನಾ ವೈರಸ್ ಹರಡುವುದಕ್ಕೆ ಬ್ರೇಕ್ ಹಾಕಲು ಸಾಕಷ್ಟ ಶ್ರಮಿಸಿದೆ.‌

ಕೊರೊನಾ ನಿಯಂತ್ರಣ ಕುರಿತು ಮಾತನಾಡಿದ ಅನೀಸ್​​ ಕಣ್ಮಣಿ ಜಾಯ್​

ಕೊಡಗು ಜಿಲ್ಲೆಯಲ್ಲಿ 400 ಜನರ ಕೋವಿಡ್ ಪರೀಕ್ಷೆ ಮಾಡುವಂತೆ ಸೂಚನೆ ನೀಡಿದ್ದರೆ. ಆರೋಗ್ಯ ಇಲಾಖೆ ಅದರ ಎರಡುಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯ 800 ಕೋವಿಡ್ ಟೆಸ್ಟ್ ಮಾಡುತ್ತಿದೆ. ಅಲ್ಲದೆ ಒಬ್ಬ ವ್ಯಕ್ತಿಗೆ ಸೋಂಕು ದೃಢವಾಗುತಿದ್ದಂತೆ ಅವರ ಪ್ರಾಥಮಿಕ ಮತ್ತು ಎರಡನೆ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಸೋಂಕಿತರು ಸಂಪೂರ್ಣ ಗುಣಮುಖರಾಗುವವರೆಗೆ ಹೋಂ ಐಸೋಲೇಷನ್ ಮಾಡಿದೆ.

ಇದರಿಂದ ಕೊಡಗಿನಲ್ಲಿ ನಿತ್ಯ 35 ರಿಂದ 40 ಪ್ರಕರಣಗಳಷ್ಟೇ ದಾಖಲಾಗುತ್ತಿವೆ. ಜೊತೆಗೆ ಸಾವನ್ನಪ್ಪುವವರ ಸಂಖ್ಯೆಯೂ ಕಡಿಮೆಯಾಗಿದೆ. ಕೊಡಗಿನ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿರುವುದು ಕೂಡ ಸೋಂಕು ಹೆಚ್ಚು ಹರಡದಂತೆ ತಡೆಯುವಲ್ಲಿ ಸಹಕಾರಿಯಾಗಿದೆ. ಜನರು ಅದನ್ನು ಮುಂದೆಯೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವುದು ಅಧಿಕಾರಿಗಳು ಮತ್ತು ಜನರ ಆಶಯ.

ABOUT THE AUTHOR

...view details