ಕರ್ನಾಟಕ

karnataka

ETV Bharat / state

ಕಡೆ ಕ್ಷಣದಲ್ಲಿ ಕೊಡಗು ರೆಸಾರ್ಟ್​ನಿಂದ ಹಿಂದೆ ಸರಿದ ಜೆಡಿಎಸ್​​​​ - undefined

ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಕೊಡಗಿನ ಪ್ಯಾಂಡಿಗ್​ಟಂನ್ ರೆಸಾರ್ಟ್​​ನಲ್ಲಿ ವಾಸ್ತವ್ಯ ಹೂಡಲು ತೀರ್ಮಾನಿಸಿದ್ದ ಜೆಡಿಎಸ್​ ಶಾಸಕರ ವಾಸ್ತವ್ಯವನ್ನು ಕಡೇ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

resort

By

Published : Jul 8, 2019, 9:52 PM IST

ಕೊಡಗು: ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆ ಕುಸಿಯುವ ಆತಂಕಕ್ಕೆ ಒಳಗಾಗಿರುವ ಕಾರಣ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್​ ರಾಜಕಾರಣ ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ, ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಕೊಡಗಿನ ಪ್ಯಾಂಡಿಗ್​ಟಂನ್ ರೆಸಾರ್ಟ್​​ನಲ್ಲಿ ವಾಸ್ತವ್ಯ ಹೂಡಲು ತೀರ್ಮಾನಿಸಿದ್ದ ಜೆಡಿಎಸ್​ ಶಾಸಕರ ವಾಸ್ತವ್ಯವನ್ನು ಕಡೇ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

ಕೊಡಗಿನ ಪ್ಯಾಂಡಿಗ್​ಟಂನ್ ರೆಸಾರ್ಟ್

ಕುಶಾಲನಗರದ 7ನೇ ಹೊಸಕೋಟೆಯ ರೆಸಾರ್ಟ್​​ನಲ್ಲಿ ಜೆಡಿಎಸ್ ಶಾಸಕರಿಗೆ 35 ಐಶಾರಾಮಿ ರೂಮ್‌ಗಳನ್ನು ಬುಕ್​ ಕೂಡ ಮಾಡಲಾಗಿತ್ತು. ಆದರೆ, ಜೆಡಿಎಸ್ ಶಾಸಕರ‌ ಕೊಡಗು ರೆಸಾರ್ಟ್ ವಾಸ್ತವ್ಯವನ್ನು ಕಡೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಕೊಡಗಿನ ರೆಸಾರ್ಟ್​ ವಾಸ್ತವ್ಯ ರದ್ದುಪಡಿಸಿ ದೇವನಹಳ್ಳಿಯ ರೆಸಾರ್ಟ್​ಗೆ ತೆರಳಿದ್ದಾರೆ. ರೆಸಾರ್ಟ್‌ ಬಳಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ವಾಪಸ್ ಮರಳಿದ್ದಾರೆ.

For All Latest Updates

TAGGED:

ABOUT THE AUTHOR

...view details