ಕರ್ನಾಟಕ

karnataka

ETV Bharat / state

ಕಾರ್ಮಿಕ ಮಹಿಳೆ ಸಾವು: ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಮಡಿಕೇರಿ ರಕ್ಷಣಾ ವೇದಿಕೆ - Labor woman

ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ, ಮಹಿಳೆಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದರು. ಲಾಕ್‌ಡೌನ್ ಪರಿಣಾಮ ಸ್ವಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಆಗದಿದ್ದರಿಂದ ರಕ್ಷಣಾ ವೇದಿಕೆ ಮುಖಂಡರು ಮುಂದೆ ನಿಂತು ಅಂತ್ಯ ಸಂಸ್ಕಾರ ನಡೆಸಿದ್ದಾರೆ.

The death of a Labor woman in kodagu
ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ರಕ್ಷಣಾ ವೇದಿಕೆ

By

Published : Apr 23, 2020, 10:34 AM IST

Updated : Apr 23, 2020, 10:47 AM IST

ಮಡಿಕೇರಿ(ಕೊಡಗು): ಅನಾರೋಗ್ಯದಿಂದ ಮೃತಪಟ್ಟ ಕಾರ್ಮಿಕ ಮಹಿಳೆಯ ಅಂತ್ಯ ಸಂಸ್ಕಾರನ್ನು ರಕ್ಷಣಾ ವೇದಿಕೆ ನೆರವೇರಿಸಿ ಮಾನವೀಯತೆ‌ ಮೆರೆದಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.‌

ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ರಕ್ಷಣಾ ವೇದಿಕೆ

ಮಡಿಕೇರಿ ರಕ್ಷಣಾ ವೇದಿಕೆ ಹಾಗೂ ಯೂತ್ ಕಮಿಟಿಯಿಂದ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಅನಾರೋಗ್ಯದಿಂದ ಕಾರ್ಮಿಕ ಚಂದ್ರ ಎಂಬಾತನ ಪತ್ನಿ‌ ಕವಿತಾ ಮೃತಪಟ್ಟಿದ್ದರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮ ಗ್ರಾಮದವರಾದ ಈ ಕುಟುಂಬ ಲಾಕ್‌ಡೌನ್‌ಗೂ ಮೊದಲೇ ಸೋಮವಾರಪೇಟೆ ತಾಲೂಕಿನ ಮಾದಾಪುರದ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದರು.

ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ, ಕವಿತಾ ಅವರಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಮೃತಪಟ್ಟಿದ್ದಾರೆ. ಲಾಕ್‌ಡೌನ್ ಪರಿಣಾಮ ಸ್ವಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಆಗದಿದ್ದರಿಂದ ರಕ್ಷಣಾ ವೇದಿಕೆಯ ಉಮೇಶ್ ಹಾಗೂ ಸಂದೀಪ್ ಹಾಗೆಯೇ ಯೂತ್ ಕಮಿಟ್ ಕಲೀಲ್ ಸೇರಿದಂತೆ ಹಲವರು ಸ್ವತಃ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾನೆ.

Last Updated : Apr 23, 2020, 10:47 AM IST

ABOUT THE AUTHOR

...view details