ಕರ್ನಾಟಕ

karnataka

ETV Bharat / state

ಕೊಡಗಿನ ಕಾರ್ಮಿಕರಿಗೂ ತಟ್ಟಿದ ಕೊರೊನಾ ಬಿಸಿ... ತವರಿನತ್ತ ಮುಖಮಾಡಿದ ಬಡಪಾಯಿಗಳು ​ - ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್

ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಇದೀಗ ಕೊಡಗಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲೂ ಭಯ ಹುಟ್ಟಿಸಿದೆ. ಹೀಗಾಗಿ ಅವರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ.

The Corona Effect coffee workers stop the work
ಕೊರೊನಾಕ್ಕೆ ಹೆದರಿ ಸ್ವಾ ಗ್ರಾಮಗಳತ್ತ ಮುಖ ಮಾಡಿದ ಕಾರ್ಮಿಕರು

By

Published : Mar 13, 2020, 11:40 PM IST

ಮಡಿಕೇರಿ: ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಇದೀಗ ಕೊಡಗಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲೂ ಭಯ ಹುಟ್ಟಿಸಿದೆ.

ಕೊರೊನಾಕ್ಕೆ ಹೆದರಿ ಸ್ವಾ ಗ್ರಾಮಗಳತ್ತ ಮುಖ ಮಾಡಿದ ಕಾರ್ಮಿಕರು

ತಮಿಳುನಾಡು, ಅಸ್ಸೋಂ ಸೇರಿದಂತೆ ವಿವಿಧ ರಾಜ್ಯಗಳಿಂದ ಕೂಲಿ ಕೆಲಸ ಅರಸಿ ಬಂದಿದ್ದ ಕಾರ್ಮಿಕರು, ಜಿಲ್ಲೆಯಿಂದ ತವರು ರಾಜ್ಯಗಳಿಗೆ ವಾಪಸ್ ಹೊರಟಿದ್ದಾರೆ. ಜಿಲ್ಲೆಯಲ್ಲಿರುವ ಹೊರ ರಾಜ್ಯದ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗುವುದಕ್ಕಾಗಿ ಮಡಿಕೇರಿ ಬಸ್​ ನಿಲ್ದಾಣದಲ್ಲಿ ಜಮಾಯಿಸಿರುವ ದೃಶ್ಯ ಕಂಡುಬಂದಿದೆ.

ರಾಜ್ಯ ಸರ್ಕಾರ ಈಗಾಗಲೇ ಸಭೆ, ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಆದೇಶ ಹೊರಡಿಸಿದ ಹಿನ್ನೆಲೆ ಆತಂಕಗೊಂಡಿರುವ ಕಾರ್ಮಿಕರು, ಸ್ವಗ್ರಾಮಗಳತ್ತ ಮುಖ ಮಾಡಿದ್ದಾರೆ.

ABOUT THE AUTHOR

...view details