ಕೊಡಗು : ಉಕ್ಕಿ ಹರಿಯುವ ಕಾವೇರಿ ನದಿಯಲ್ಲಿ ಜನರಿದ್ದ ಬೋಟೊಂದು ಕೆಟ್ಟು ನಿಂತಿದ್ದು ಬಳಿಕ, ಮರದ ಕೊಂಬೆ ಹಿಡಿದು ರಕ್ಷಣೆ ಪಡೆದ ಘಟನೆ ಜಿಲ್ಲೆಯ ದುಬಾರೆಯಲ್ಲಿ ನಡೆದಿದೆ.
ಕೊಡಗು : ಉಕ್ಕಿಹರಿವ ನದಿಯಲ್ಲಿ ಸಿಲುಕಿಕೊಂಡ ಬೋಟ್ , ಹಲವೆಡೆ ಭೂಕುಸಿತ ಇಲ್ಲಿನ ಸೋಮವಾರ ಪೇಟೆ ತಾಲೂಕಿನ ಕುಶಾಲನಗರ ಸಮೀಪದ ದುಬಾರೆಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು,ದುಬಾರೆಯಿಂದ ಆನೆ ಕ್ಯಾಂಪ್ ಕಡೆಗೆ ಬರುವಾಗ 10ಕ್ಕೂ ಹೆಚ್ಚು ಜನರು ಇದ್ದ ಬೋಟ್ ನಡು ನೀರಿನಲ್ಲಿ ಕೆಟ್ಟು ನಿಂತಿದೆ.
ನದಿ ನೀರಿನ ರಭಸಕ್ಕೆ ತೇಲಿ ಹೋಗುತ್ತಿದ್ದಾಗ ಮರದ ಕೊಂಬೆಯನ್ನು ಹಿಡಿದು ಬೋಟನ್ನು ತಡೆದು ನಿಲ್ಲಿಸಲಾಗಿದೆ. ಸುಮಾರು 30 ನಿಮಿಷ ಗಳ ಕಾಲ ಬೋಟ್ ರಿಪೇರಿಯಾಗದೇ ಅಲ್ಲಿಯೇ ಇತ್ತು. ಬಳಿಕ ಇನ್ನೊಂದು ಬೋಟ್ ನ ಸಹಾಯದಿಂದ ಈ ಬೋಟಿನಲ್ಲಿದ್ದ ಜನರನ್ನು ರಕ್ಷಣೆ ಮಾಡಲಾಯಿತು.
ಹಲವೆಡೆ ಭೂ ಕುಸಿತ: ಜಿಲ್ಲೆಯ ಹಲವೆಡೆ ಭೂಕುಸಿತವಾಗಿದ್ದು ಜನರು ಆತಂಕದಲ್ಲಿದ್ದಾರೆ. ಗಡಿ ಭಾಗ ಚಂಬು ಗ್ರಾಮದಲ್ಲಿ ಇಂದು ಮುಂಜಾನೆ 4.30ಕ್ಕೆ ಭೂಮಿಯ ಅಡಿಯಿಂದ ಬಾರಿ ಶಬ್ದವೊಂದು ಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಮಡಿಕೇರಿ ಸಮೀಪದ ಮೊಣಂಗೇರಿ ಗ್ರಾಮದಲ್ಲಿ ಮಳೆ ಹೆಚ್ಚಾಗಿ ಮನೆ ಮೇಲೆ ಮಣ್ಣು ಕುಸಿದಿದ್ದು, ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಓದಿ :ಸಿದ್ದರಾಮಯ್ಯ ನನ್ನ ಮಧ್ಯೆ ಮನಸ್ತಾಪದ ಪ್ರಶ್ನೆ ಇಲ್ಲ, ಅವರೊಂದಿಗೆ ಎಂದಿಗೂ ನಾವಿದ್ದೇವೆ: ಸತೀಶ ಜಾರಕಿಹೊಳಿ