ಕರ್ನಾಟಕ

karnataka

ETV Bharat / state

ತಲಕಾವೇರಿ: ತಂತ್ರಿಗಳ ಸಲಹೆ ಮೇರೆಗೆ ಪೂಜೆ ಪ್ರಾರಂಭಿಸಲು ಆಗ್ರಹ - ತಲಕಾವೇರಿ ಬೆಟ್ಟ

ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ದೇವಳದ ಅರ್ಚಕರ ಕುಟುಂಬ ಕಣ್ಮರೆಯಾಗಿದೆ. ಹೀಗಾಗಿ, ತಲಕಾವೇರಿಯಲ್ಲಿ ಸೂತಕದ ಛಾಯೆ ಉಂಟಾಗಿದೆ. ಈ ಕೂಡಲೇ ತಂತ್ರಿಗಳ ಸಲಹೆ ಪಡೆದು ತಲಕಾವೇರಿಯಲ್ಲಿ ಪೂಜೆ ಪ್ರಾರಂಭಿಸಬೇಕು ಎಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ.

ಎಂ.ಪೂವಯ್ಯ ಪತ್ರಿಕಾಗೋಷ್ಠಿ

By

Published : Aug 13, 2020, 3:13 PM IST

ಕೊಡಗು: ತಲಕಾವೇರಿಯಲ್ಲಿ ಸೂತಕದ ಛಾಯೆ ಇರುವುದರಿಂದ ತಂತ್ರಿಗಳ ಸಹಾಯ ಪಡೆದು ದೇಗುಲದಲ್ಲಿ ಪೂಜೆ ಆರಂಭಿಸುವಂತೆ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಮುಖಂಡರು ಸಲಹೆ ನೀಡಿದ್ದಾರೆ.‌

ಮಾಧ್ಯಮಗೋಷ್ಟಿಯಲ್ಲಿ ಎಂ.ಪೂವಯ್ಯ ಬೆಟ್ಟ ಕುಸಿತಕ್ಕೆ ಕಾರಣಗಳನ್ನು ನೀಡಿದರು.

ತಲಕಾವೇರಿಯಲ್ಲಿನ ಭೂಕುಸಿತ ಒಂದು ಸ್ವಯಂಕೃತ ಅಪರಾಧ. ಇಲ್ಲಿನ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ದೇಗುಲವನ್ನು ಅಭಿವೃದ್ಧಿ ಮಾಡಬೇಕಾಗಿತ್ತು. ಆದರೆ ಮೂಲ ಸ್ವರೂಪಕ್ಕೆ ಧಕ್ಕೆ ತಂದು ಕಾಂಕ್ರಿಟೀಕರಣ ಮಾಡಲಾಗಿದ್ದು ಭೂಕುಸಿತ ಸಂಭವಿಸಿದೆ. ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿಷೇಧ ಹೇರುವಂತೆ ಈ ಹಿಂದೆ ಕೋರಿದ್ದೆವು. ಆದರೆ ಇದಕ್ಕೆ ಯಾರೂ ಸಹ ಬೆಂಬಲ ನೀಡಲಿಲ್ಲ. ವರ್ಷಕ್ಕೆ ಸುಮಾರು 5 ರಿಂದ 6 ಲಕ್ಷ ಪ್ರವಾಸಿಗರು ಬೆಟ್ಟ ಏರುತ್ತಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ನಾವು ಸಂಕಷ್ಟ ಎದುರಿಸುವಂತಾಗಿದೆ ಎಂದರು.

ಇನ್ನು ಕುಸಿದಿರುವ ಗಜರಾಜಗಿರಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಇಂಗುಗುಂಡಿ ತೆಗೆದಿದ್ದಾರೆ. ತಲಕಾವೇರಿಯಿಂದ ಸುಮಾರು 700 ಮೀಟರ್ ದೂರದಲ್ಲಿರುವ ಕೋಳಿಕಾಡಿನಲ್ಲಿ ಜೆ.ಟಿ.ಸತೀಶ್ ಎನ್ನುವವರು ಬೆಟ್ಟ ಸಮಗೊಳಿಸಿ ರೆಸಾರ್ಟ್ ಮಾಡುವುದಕ್ಕೆ ಕೆರೆ ನಿರ್ಮಿಸಿದ್ದರು.‌ ಇದೂ ಕೂಡಾ ಬ್ರಹ್ಮಗಿರಿ ಬೆಟ್ಟ ಕುಸಿಯಲು ಕಾರಣವಾಗಿದೆ ಎಂದು ಅವರು ದೂರಿದರು.

ತಲಕಾವೇರಿಯ ಕುಂಡಿಕೆ ಮತ್ತು ತೀರ್ಥಕೊಳಗಳನ್ನು ಯಾವುದೇ ಕಾರಣಕ್ಕೂ ಮುಟ್ಟದಂತೆ ನ್ಯಾಯಾಲಯ ಕೂಡ ಸೂಚಿಸಿತ್ತು. ಆದರೆ ಕೋರ್ಟ್ ಸೂಚಿಸುವ ಹೊತ್ತಿಗೆ ಈ ಎಲ್ಲಾ ಕಾಮಗಾರಿಗಳು ಮುಗಿದು ಹೋಗಿತ್ತು. ಇದಾದ ಬಳಿಕ ಪುನಃ ತೀರ್ಥಕೊಳದ ಪಕ್ಕ ಗ್ಯಾಲರಿ ಮಾಡದಂತೆ ಹೇಳಲಾಗಿತ್ತು. ಅದಲ್ಲದೆ, ತಲಕಾವೇರಿಗೆ ಹೋಗುವ ರಸ್ತೆಗೆ ಎಲ್ಲೂ ತಡೆಗೋಡೆ ನಿರ್ಮಿಸಿಲ್ಲ, ತಲಕಾವೇರಿಯನ್ನು ಪುಣ್ಯಕ್ಷೇತ್ರ ಎಂದು ಪರಿಗಣಿಸುವ ಬದಲಾಗಿ ಪ್ರವಾಸೋದ್ಯಮ ಕ್ಷೇತ್ರವಾಗಿಸಲು ಮಾಡಿರುವ ಕಾರ್ಯಗಳೇ ದುರಂತಕ್ಕೆ ಕಾರಣ ಎಂದು ಪೂವಯ್ಯ ದೂರಿದ್ದಾರೆ.

ABOUT THE AUTHOR

...view details