ಕೊಡಗು:ಮಹಿಳೆಯೊಬ್ಬರ ಬಳಿ ಭೂಮಿ ವರ್ಗಾವಣೆಗೆ 15 ಸಾವಿರ ರೂ. ಬೇಡಿಕೆ ಇಟ್ಟು ಹಣ ತೆಗೆದುಕೊಳ್ಳುತ್ತಿದ್ದಾಗ ವಿರಾಜಪೇಟೆ ತಹಶೀಲ್ದಾರ್ ಪುರಂದರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಭೂಮಿ ವರ್ಗಾವಣೆಗೆ ಲಂಚ ಪಡೆದ ತಹಶೀಲ್ದಾರ್: ಇದೀಗ ಎಸಿಬಿ ಅಧಿಕಾರಿಗಳ ಅತಿಥಿ - ಎಸಿಬಿ ಡಿವೈಎಎಸ್ಪಿ ಪೂರ್ಣಚಂದ್ರ ತೇಜಸ್ವಿ
ಮಹಿಳೆಯೊಬ್ಬರ ಬಳಿ ಭೂಮಿ ವರ್ಗಾವಣೆಗೆ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಹಣ ತೆಗೆದುಕೊಳ್ಳುತ್ತಿದ್ದಾಗ ವಿರಾಜಪೇಟೆ ತಹಶೀಲ್ದಾರ್ ಪುರಂದರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಭೂಮಿ ವರ್ಗಾವಣೆಗೆ ಲಂಚ ಪಡೆದ ತಹಶೀಲ್ದಾರ್
ಹುದಿಕೇರಿ ಗ್ರಾಮದ ಮಮತಾ ನರೇಂದ್ರ ಎಂಬಾಕೆಯಿಂದ ಜಮೀನು ಖರೀದಿಸಿದ್ದರು. ಅದನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಅವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಜಮೀನಿಗೆ ಸಂಬಂಧಿಸಿದಂತೆ ಕಡತ ವಿಲೇವಾರಿಗೆ ಆಕೆಯಿಂದ 7 ಸಾವಿರ ತೆಗೆದುಕೊಳ್ಳುವಾಗ ಹಾಸನದ ಎಸಿಬಿ ಡಿವೈಎಎಸ್ಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.