ಮಡಿಕೇರಿ (ಕೊಡಗು): ನಗರದ ಮಹಾದೇವಪೇಟೆಯಲ್ಲಿ ವಾಸವಿದ್ದ ಗೃಹಿಣಿಯೊಬ್ಬರು ಬುಧವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಭಾಗ್ಯಶ್ರೀ (18) ಮೃತಪಟ್ಟ ಗೃಹಿಣಿಯಾಗಿದ್ದು, ನಗರ ಠಾಣೆ ಪೊಲೀಸರು ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಡಿಕೇರಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು
ಇಲ್ಲಿನ ಮಹಾದೇವಪೇಟೆಯಲ್ಲಿ ವಾಸವಿದ್ದ ಗೃಹಿಣಿ ಭಾಗ್ಯಶ್ರೀ ಎಂಬುವರು ಬುಧವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತದೇಹ ಹಾಸಿಗೆ ಮೇಲೆ ಇದ್ದದ್ದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.
ಮಡಿಕೇರಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು..!
ಭಾಗ್ಯಶ್ರೀ ತಾಯಿ ನಗರದ ಸಂಪಿಗೆಕಟ್ಟೆಯಲ್ಲಿ ವಾಸ ಮಾಡುತ್ತಿದ್ದರು. ಪುತ್ರಿಯ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತದೇಹ ಹಾಸಿಗೆ ಮೇಲೆ ಇದ್ದದ್ದು ಅನುಮಾನಕ್ಕೆ ಕಾರಣವಾಗಿದೆ. ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.