ಕರ್ನಾಟಕ

karnataka

ETV Bharat / state

ಅಮ್ಮನನ್ನು ಮಮ್ಮಿ ಅನ್ನಬೇಡಿ, ಪ್ರೀತಿಯಿಂದ ಅಮ್ಮ ಅನ್ನಿ: ಶಾಲೆಯಲ್ಲಿ ಶಿಕ್ಷಣ ಸಚಿವರ ನೀತಿಪಾಠ - Kodagu suresh kumar news

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕರಾಗಿ ಮಕ್ಕಳೊಂದಿಗೆ ಬೆರೆತು ನೀತಿಪಾಠ ಹೇಳಿದರು.

ಶಾಲಾ ಮಕ್ಕಳಿಗೆ ಸುರೇಶ್ ಕುಮಾರ್ ನೀತಿಪಾಠ

By

Published : Oct 5, 2019, 7:26 PM IST

ಕೊಡಗು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕರಾಗಿ ಮಕ್ಕಳೊಂದಿಗೆ ಬೆರೆತು ನೀತಿಪಾಠ ಹೇಳಿದರು.

ಶಾಲಾ ಮಕ್ಕಳಿಗೆ ಸಚಿವ ಸುರೇಶ್ ಕುಮಾರ್ ನೀತಿಪಾಠ

ಮಡಿಕೇರಿ ತಾಲೂಕಿನ ಕತ್ತಲೆಕಾಡು-ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಹಾಗೂ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಸಚಿವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣ ಶಾಲೆಗೆ ಭೇಟಿ ನೀಡಿದ ಸುರೇಶ್​ ಕುಮಾರ್​ ಮಕ್ಕಳೊಂದಿಗೆ ಬೆರೆತು ನೀತಿಪಾಠ ಬೋಧಿಸಿದರು.

ಮಕ್ಕಳೇ, ನೀವು ಅಮ್ಮನನ್ನು ಮಮ್ಮಿ ಅಂತ ಕರೆಯಬೇಡಿ.‌ ಪ್ರೀತಿಯಿಂದ ಅಮ್ಮ ಅಂತ ಕರೆಯಿರಿ.‌ ಮಮ್ಮಿ ಅಂದರೆ ಇಂಗ್ಲಿಷ್‌ನಲ್ಲಿ ಶವ ಅಂತ ಅರ್ಥ. ನಮ್ಮ ಹೆತ್ತಮ್ಮನನ್ನು ಮಮ್ಮಿ ಅಂತ ಕರೆಯಬೇಕಾ? ಅಂತಾ ಸರ್ಕಾರಿ ಶಾಲೆ ಮಕ್ಕಳಿಗೆ ನೀತಿಪಾಠ ಬೋಧಿಸಿದರು. ‌ದಸರಾ ರಜೆ ಅವಧಿಯಲ್ಲಿ ಕಥೆ ಪುಸ್ತಕ ಓದಬೇಕು ಎಂದು ಕಿವಿಮಾತು ಹೇಳಿದರು.

ABOUT THE AUTHOR

...view details