ಕರ್ನಾಟಕ

karnataka

ETV Bharat / state

ಕೊಡಗು : ಸಮವಸ್ತ್ರ ನಿಯಮ ಧಿಕ್ಕರಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು.. - ಕೊಡಗಿನಲ್ಲಿ ಸಮವಸ್ತ್ರ ನಿಯಮ ದಿಕ್ಕರಿಸಿದ ಶಾಲಾ ವಿದ್ಯಾರ್ಥಿಗಳು

ಇವರೆಲ್ಲರೂ ಕೂಡ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ‌. ಈ ಘಟನೆ ಸಂಬಂಧ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ..

students-facing-problem-in-kodagu
ಕೊಡಗು

By

Published : Feb 14, 2022, 5:05 PM IST

ಕೊಡಗು : ಹಿಜಾಬ್ ವಿಚಾರ ಈಗಾಗಲೇ ರಾಜ್ಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಇಂದಿನಿಂದ ಜಿಲ್ಲೆಯಲ್ಲಿ ಪ್ರೌಢಶಾಲೆಗಳನ್ನ ಆರಂಭಿಸಲಾಗಿದೆ.

ಸಮವಸ್ತ್ರವನ್ನ ಧರಿಸಿ ಶಾಲೆಗೆ ಬರಬೇಕೆಂಬ ನಿಯಮವಿದ್ರೂ ಕೂಡ ಇದನ್ನ ಧಿಕ್ಕರಿಸಿ 32 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದರು. ಹೀಗಾಗಿ, ಇವರಲ್ಲಿ ಮೂವತ್ತೊಂದು ವಿದ್ಯಾರ್ಥಿಗಳನ್ನ ಹಿಂದಕ್ಕೆ ಕಳುಹಿಸಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಲಿ ಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್​ನಲ್ಲಿ ನಡೆದಿದೆ.

ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರನ್ನ ಸಿಬ್ಬಂದಿ ಶಾಲೆ ಪ್ರವೇಶಿಸದಂತೆ ತಡೆ ಹಿಡಿದು ಎಲ್ಲರೂ ಹಿಜಾಬ್ ಕಳಚಿ ಸಮವಸ್ತದಲ್ಲಿ ಬರುವಂತೆ ಸೂಚಿಸಿದ್ದಾರೆ.

ಮೂವತ್ತೆರಡು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ‌ ಮಾತ್ರ ಹಿಜಾಬ್ ತೆಗೆದು ಶಾಲೆ ಪ್ರವೇಶಿಸಿದ್ದು, ಮೂವತ್ತೊಂದು ವಿದ್ಯಾರ್ಥಿನಿಯರನ್ನ ಹೊರ ಕಳುಹಿಸಲಾಗಿದೆ‌.

ಇವರೆಲ್ಲರೂ ಕೂಡ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ‌. ಈ ಘಟನೆ ಸಂಬಂಧ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಓದಿ:ಹಿಜಾಬ್ ಅರ್ಜಿಗಳ ವಿಚಾರಣೆ ಪ್ರಾರಂಭ.. ಮಾಧ್ಯಮಗಳು ಜವಾಬ್ದಾರಿಯಿಂದ ನಡೆದಕೊಳ್ಳಬೇಕು.. ಸಿಜೆ ಮನವಿ

ABOUT THE AUTHOR

...view details