ಕರ್ನಾಟಕ

karnataka

ETV Bharat / state

ಕೊಡಗು: ನ್ಯಾಯ ಸಿಕ್ಕಿಲ್ಲವೆಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ - ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ

ಕಳೆದ ಮಂಗಳವಾರ ಕೇಸರಿ ಶಾಲು ಧರಿಸಿದ ಕಾರಣಕ್ಕೆ ನನ್ನ ಮೇಲೆ ಆರೇಳು ವಿದ್ಯಾರ್ಥಿಗಳು ಹಲ್ಲೆ‌ ನಡೆಸಿದ್ದರು. ಪೊಲೀಸರು ಕೇವಲ‌ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಹಾಸ್ಟೆಲ್​ನಲ್ಲಿ‌ ಕೂಡ ಇತರೆ ವಿದ್ಯಾರ್ಥಿಗಳು ನನ್ನನ್ನು ದೂರ ಇಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ
ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

By

Published : Feb 11, 2022, 8:33 AM IST

ಕೊಡಗು: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಹಲ್ಲೆಗೆ ಸರಿಯಾದ ನ್ಯಾಯ ಸಿಕ್ಕಿಲ್ಲ, ಹಾಸ್ಟೆಲ್ ವಾರ್ಡನ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯಲ್ಲಿ ಕುಶಾಲನಗರದ ಕಾಲೇಜಿ​ನಲ್ಲಿ ನಡೆದಿದೆ.

ಅಂಥೋಣಿ ಪ್ರಜ್ವಲ್ (18) ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿ. ಕಳೆದ ಮಂಗಳವಾರ ಕೇಸರಿ ಶಾಲು ಧರಿಸಿದ ಕಾರಣಕ್ಕೆ ಅಲ್ಪಸಂಖ್ಯಾತರ ಹಾಸ್ಟೆಲ್​ನಲ್ಲಿ ಈತನ ಮೇಲೆ ಅನ್ಯಕೋಮಿನ ಆರೇಳು ಮಂದಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ತನಗೆ ಸೂಕ್ತ ನ್ಯಾಯ ದೊರಕಿಲ್ಲ. ತನ್ನ ಮೇಲೆ ಆರೇಳು ವಿದ್ಯಾರ್ಥಿಗಳು ಹಲ್ಲೆ‌ ನಡೆಸಿದ್ದರೂ ಕೇವಲ‌ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಳ್ಳಲಾಗಿದೆ. ಹಾಸ್ಟೆಲ್​ನಲ್ಲಿ‌ ಕೂಡ ಇತರೆ ವಿದ್ಯಾರ್ಥಿಗಳು ತನ್ನನ್ನು ದೂರ ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

ಹಾಸ್ಟೆಲ್ ವಾರ್ಡನ್​ಗಳು ಕೂಡ ನನ್ನನ್ನು ಅಪರಾಧಿ ಎಂಬಂತೆ ಪರಿಗಣಿಸಿ ನಿನ್ನಿಂದ ಹಾಸ್ಟೆಲ್​ಗೆ ಕಳಂಕ ಉಂಟಾಗಿದೆ ಎಂದು ಮೂದಲಿಸಿದ್ದಾರೆ. ಊರಿನಲ್ಲಿರುವ ತಾಯಿಗೆ ದೂರವಾಣಿ ಕರೆ ಮಾಡಿ ‌ಕೂಡಲೇ ಬಂದು ನಿಮ್ಮ ಮಗನನ್ನು ಹಾಸ್ಟೆಲ್​ನಿಂದ ಕರೆದುಕೊಂಡು ಹೋಗಿ ಎಂದು ಒತ್ತಡ ಹೇರುತ್ತಿದ್ದಾರೆ. ನಾನು ಯಾವುದೇ ತಪ್ಪು‌ ಮಾಡದಿದ್ದರೂ ಕೂಡ ನನಗೆ ಅನ್ಯಾಯ ಉಂಟು ಮಾಡುತ್ತಿದ್ದಾರೆ ಎಂದು ಪೊಲೀಸರ ಮುಂದೆ ಅಂಥೋಣಿ ಹೇಳಿಕೆ‌ ನೀಡಿದ್ದಾನೆ.

ಇದನ್ನೂ ಓದಿ:ಫೆ. 14 ರಿಂದ ಅಧಿವೇಶನ: ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್​​ ಆದೇಶ

ಗುರುವಾರ ಬೆಳಗ್ಗೆ ಅಂಥೋಣಿ, ಸ್ನೇಹಿತರಿಗೆ ಕರೆ ಮಾಡಿ ತಾನು ವಿಷ ಸೇವಿಸುವ ವಿಷಯ ತಿಳಿಸಿ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಈತನಿಗಾಗಿ ಹುಡುಕಾಟ ನಡೆಸಿದ ಸ್ನೇಹಿತರು, ಕುಶಾಲನಗರ ಐಬಿ‌ ಬಳಿ ಪತ್ತೆ ಹಚ್ಚಿ ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.

ಈ ಕುರಿತು ಕುಶಾಲನಗರ ಪೊಲೀಸ್​ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details