ಕರ್ನಾಟಕ

karnataka

ETV Bharat / state

ನಕ್ಷತ್ರ ಆಮೆ ಮಾರಾಟ ಯತ್ನ: ನಾಲ್ವರು ಆರೋಪಿಗಳ ಬಂಧನ..! - ಕೊಡಗಿನಲ್ಲಿ ನಕ್ಷತ್ರ ಆಮೆ ಮಾರಾಟ ಯತ್ನ

ನಕ್ಷತ್ರ ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನ ಬಂಧಿಸಿ, 1.50 ಲಕ್ಷ ಮೌಲ್ಯದ ನಕ್ಷತ್ರ ಆಮೆ ಮತ್ತು ಮಹಿಂದ್ರಾ ವೆರಿಟೊ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Star Turtle Sale
ನಕ್ಷತ್ರ ಆಮೆ ಮಾರಾಟ ಯತ್ನ

By

Published : Nov 21, 2020, 12:57 PM IST

ಪೊನ್ನಂಪೇಟೆ (ಕೊಡಗು):ನಕ್ಷತ್ರ ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಪಟ್ಟಣದಲ್ಲಿ ನಡೆದಿದೆ.

ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಮೂಲದ ಲಕ್ಷ್ಮಣ, ರಾಮ ಪೋಗು ಲಕ್ಷ್ಮೀನಾರಾಯಣ, ನಾಗೇಶ್ ಹಾಗೂ ತೆಲಗು ತಿಮ್ಮಪ್ಪ ಆಮೆ ಮಾರಾಟಕ್ಕೆ ಯತ್ನಿಸಿ ಪೊಲೀಸರ ಅತಿಥಿಗಳಾದ ಆರೋಪಿಗಳು.

ಬಂಧಿತರಿಂದ 1.50 ಲಕ್ಷ ಮೌಲ್ಯದ ನಕ್ಷತ್ರ ಆಮೆ ಮತ್ತು ಮಹಿಂದ್ರಾ ವೆರಿಟೊ ಕಾರನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details