ಕೊಡಗು: ಅಳಿವಿನ ಅಂಚಿನಲ್ಲಿರುವ ಅಪರೂಪದ ಅಳಿಲು ಹಾರುವ ಬೆಕ್ಕು ಎಂದು ಕರೆಯುವ ಪ್ರಾಣಿಯನ್ನು ಭೇಟೆಯಾಡಿದ ಆರೋಪಡಿ ಅರಣ್ಯಧಿಕಾರಿಗಳು ಒಬ್ಬರನ್ನು ಬಂಧಿಸಿದ್ದಾರೆ.
ಅಳಿಲು ಹಾರುವ ಬೆಕ್ಕು ಬೇಟೆ: ಕೊಡಗಿನಲ್ಲಿ ಆರೋಪಿ ಬಂಧನ - Squirrel flying cat
ಕೊಡಗಿನಲ್ಲಿ ಅಪರೂಪದ ಅಳಿಲು ಹಾರುವ ಬೆಕ್ಕು ಕೊಂದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿ ಮಾಂಸ, ಚರ್ಮ ಹಾಗೂ ಕೋವಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೊಡಗಿನಲ್ಲಿ ಆರೋಪಿ ಬಂಧನ
ಜಿಲ್ಲೆಯ ಅಯ್ಯಂಗೇರಿ ಗ್ರಾಮದ ನಿವಾಸಿ ಸುನೀಲ್ ಬಂಧಿತ. ಮುದ್ದು ಸೋಮಯ್ಯ, ಮೇದಪ್ಪ ತಲೆಮರೆಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಆರೋಪಿಗಳು ಸೆರೆಗೆ ಬಲೆಬೀಸಿದ್ದಾರೆ. ಈ ದೊಡ್ಡ ಬೆಕ್ಕು ಮಾಕ್ಕುಟ್ಟ ಭಾಗದಲ್ಲಿ ಮಾತ್ರ ಹೆಚ್ಚು ಕಾಣಿಸುತ್ತದೆ.
ಬದುಕಿನಿಂದ ಗುಂಡು ಹಾರಿಸಿ ಪ್ರಾಣಿಯನ್ನು ಕೊಂದು ಮಾಂಸವನ್ನು ಮೂವರು ಹಂಚಿಕೊಂಡಿದ್ದಾರೆ. ಸುನೀಲ್ ಮನೆಯಲ್ಲಿ ಮಾಂಸದ ಅಡುಗೆ ಮಾಡಿರುವ ಮಾಹಿತಿ ಮೇರೆಗೆ ಅರಣ್ಯಧಿಕಾರಿಗಳು ದಾಳಿಮಾಡಿ ಮಾಂಸ,ಚರ್ಮ ಹಾಗೂ ಕೋವಿಯನ್ನು ವಶಕ್ಕೆ ಪಡೆದಿದ್ದಾರೆ.