ಕರ್ನಾಟಕ

karnataka

ETV Bharat / state

ಮನೆಯಲ್ಲಿಯೇ ತಯಾರಾಗುತ್ತಿವೆ ಬೈಕ್, ಇತರ ವಾಹನಗಳು: ಖಾಸಗಿ ಕೆಲಸ ಬಿಟ್ಟು ಸೈ ಎನಿಸಿಕೊಂಡ ಯುವಕ - ಮನೆಯಲ್ಲಿಯೇ ವಾಹನ ತಯಾರು ಮಾಡುತ್ತಾನೆ ಮಡಿಕೇರಿ ಯುವಕ

ಆದರ್ಶ್ ಎಂಬ ಯುವಕ ಎಲ್ಲರಂತಲ್ಲ. ತನ್ನದೇ ಆಲೋಚನೆ ಮೂಲಕ ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಬಿಳಿಗೇರಿ ನಿವಾಸಿಯಾದ ಆದರ್ಶ್ ಐಟಿಐ ಯಲ್ಲಿ ಎಂಎಂವಿ ಮಾಡಿ ಹಲವು ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ನಂತರ ಸ್ವತಃ ಯಾಕೆ ವಾಹನಗಳನ್ನು ತಯಾರಿಸಬಾರದು ಎಂದು ಯೋಚಿಸಿ ಕೆಲಸಕ್ಕೆ ಗುಡ್ ಬೈ ಹೇಳಿ ಮನೆ ಕಡೆ ಮುಖ ಮಾಡಿದ್ದರು.

ಮನೆಯಲ್ಲಿಯೇ ವಾಹನ ತಯಾರು ಮಾಡುತ್ತಾನೆ ಮಡಿಕೇರಿ ಯುವಕ
ಮನೆಯಲ್ಲಿಯೇ ವಾಹನ ತಯಾರು ಮಾಡುತ್ತಾನೆ ಮಡಿಕೇರಿ ಯುವಕ

By

Published : Feb 14, 2022, 5:06 PM IST

ಮಡಿಕೇರಿ: ಈ ಯುವಕ ಬೇರೆ ಬೇರೆ ವಾಹನ ತಯಾರಿಕಾ ಕಂಪನಿಗಳಲ್ಲಿ ಕೆಲಸ ಮಾಡಿದ್ದ. ಕೊನೆಗೆ ತಾನೇ ಯಾಕೆ ವಾಹನಗಳನ್ನು ತಯಾರು ಮಾಡಬಾರದು ಎಂದು ಆಲೋಚಿಸಿ ಕೆಲಸಕ್ಕೆ ಗುಡ್​ಬೈ ಹೇಳಿ, ಇದೀಗ ತಮ್ಮದೇ ಶೈಲಿಯಲ್ಲಿ ಮನೆಯಲ್ಲಿ ವಾಹನಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಹಾಗಾದರೆ ಆ ಯುವಕ ಮಾಡಿರುವ ವಾಹಗಳೆಷ್ಟು? ಆತನ ಪ್ರತಿಭೆ ಏನು ಎಂಬುದರ ಮಾಹಿತಿ ಇಲ್ಲಿದೆ.

ತಾನೇ ತಯಾರು ಮಾಡಿದ ವಾಹನದಲ್ಲಿ ಆದರ್ಶ್​​

ಆದರ್ಶ್ ಎಂಬ ಯುವಕ ಎಲ್ಲರಂತಲ್ಲ. ತನ್ನದೇ ಆಲೋಚನೆ ಮೂಲಕ ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಕಾರಣ ಅವರ ಬುದ್ದಿಬಂತಿಕೆ. ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಬಿಳಿಗೇರಿ ನಿವಾಸಿಯಾದ ಆದರ್ಶ್ ಐಟಿಐ ಯಲ್ಲಿ ಎಂಎಂವಿ ಮಾಡಿ ಹಲವು ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ನಂತರ ಸ್ವತಃ ಯಾಕೆ ವಾಹನಗಳನ್ನು ತಯಾರಿಸಬಾರದು ಎಂದು ಯೋಚಿಸಿ ಕೆಲಸಕ್ಕೆ ಗುಡ್ ಬೈ ಹೇಳಿ ಮನೆ ಕಡೆ ಮುಖ ಮಾಡಿದ್ದರು. ಇದೀಗ ಕಳೆದ ಕೆಲವು ವರ್ಷಗಳಿಂದ ಬೈಕ್, ಕೃಷಿ ಯಂತ್ರೋಪಕರಣಗಳು ಸೇರಿದಂತೆ ಹಲವು ವಾಹನಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರೇಮಿಗಳ ದಿನವೇ ನವ ದಂಪತಿ ದೂರ.. ಮಗಳನ್ನೇ ಕಿಡ್ನಾಪ್ ಮಾಡಿದ ಪೋಷಕರು.. ಹೆಂಡ್ತಿಗಾಗಿ ಗಂಡನಿಂದ ದೂರು!

ಎಲ್ಲ ಬಿಡಿಭಾಗಗಳನ್ನು ತಂದು ಮನೆಯಲ್ಲಿಯೇ ಇದಕ್ಕೆ ಒಂದು ರೂಪ ಕೊಡುತ್ತಿದ್ದಾರೆ ಆದರ್ಶ್. ಇದುವರೆಗೆ 6 ಬೈಕ್ ,2 ಸ್ಕೂಟರ್, ಸಾಮಗ್ರಿ ಸಾಗಿಸುವ 4 ಟ್ರ್ಯಾಲಿಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ.ಇಷ್ಟಕ್ಕೆ ಇವರ ಉತ್ಸಾಹ ಕಡಿಮೆಯಾಗಿಲ್ಲ. ಇದುವರೆಗೆ ಇಂಧನಚಾಲಿತ ವಾಹನಗಳನ್ನು ತಯಾರು ಮಾಡಿರುವ ಆದರ್ಶ್ ಇದೀಗ ಬ್ಯಾಟರಿಚಾಲಿತ ವಾಹನಗಳನ್ನು ತಯಾರು ಮಾಡುವ ಕಾರ್ಯದ ಬಗ್ಗೆ ಆಲೋಚಿಸುತ್ತಿದ್ದಾರೆ.

ವಿಶೇಷ ಎಂದರೆ ಆದರ್ಶ್ ತಯಾರಿಸಿದ ಬೈಕ್ ಹಾಗೂ ಸಣ್ಣ ಕಾರುಗಳು ರೆಸಾರ್ಟ್, ಹೋಂಸ್ಟೇಗಳಲ್ಲಿ ಉಪಯೋಗಿಸಲು ಹೇಳಿ ಮಾಡಿಸಿದಂತಿದೆ. ಆದ್ದರಿಂದ ರೆಸಾರ್ಟ್ ಗಳಿಗೆ ತಮ್ಮ ವಾಹನಗಳನ್ನು ಮಾರಾಟ ಮಾಡಿದ್ದಾರೆ.

ಮನೆಯಲ್ಲೇ ವಾಹನ ತಯಾರು ಮಾಡಿ ಮಾರುತ್ತಿರುವ ಯುವಕ

ಇನ್ನು ಏಲಕ್ಕಿ ಹಾಗೂ ಕಾಳು ಮೆಣಸು ಒಣಗಿಸುವ ಯಂತ್ರಗಳು, ಮೆಣಸು ಬಿಡಿಸುವ ಯಂತ್ರಗಳನ್ನು ಸಹ ಇವರು ತಯಾರು ಮಾಡಿದ್ದಾರೆ. ಮಗನ ಈ ಸಾಧನೆಗೆ ಪೋಷಕರು ಸಂತಸಗೊಂಡಿದ್ದು, ಮಗನ ಪ್ರತಿಭೆ ಹೊರಜಗತ್ತಿಗೆ ಗೊತ್ತಾದರೆ ಸಾಕು, ಅವಕಾಶಗಳು ತಾನಾಗಿಯೇ ಬರಬಹುದು ಎನ್ನುತ್ತಾರೆ ಪೋಷಕರು.

ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಯ ಕಾಯಿಯಂತಿರುವ ಇಂತಹ ಪ್ರತಿಭೆಗಳಿಗೆ ಉತ್ತಮ ಅವಕಾಶ ಒದಗಿಬರಲಿ. ಆ ಮೂಲಕ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂಬುದು ಸ್ಥಳೀಯರ ಆಶಯ.

For All Latest Updates

TAGGED:

ABOUT THE AUTHOR

...view details