ನಾಪೋಕ್ಲು/ಕೊಡಗು :ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಹೆತ್ತ ವಯೋವೃದ್ದ ತಂದೆ-ತಾಯಿಯನ್ನು ದೊಣ್ಣೆಯಿಂದ ಥಳಿಸಿ ಹತ್ಯೆಗೈದ ಅಮಾನವೀಯ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೋಕೇರೆ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ಸಮೀಪದ ಕೋಕೇರಿ ಗ್ರಾಮದ ನಿವಾಸಿಗಳಾದ ರಾಜ (70) ಮತ್ತು ಗೌರಿ (62) ಎಂಬುವರು ಮಗನಿಂದ ಹತ್ಯೆಗೀಡಾದ ನತದೃಷ್ಟರು. ಕೋಕೇರಿ ಗ್ರಾಮದ ಚೇನಂಡ ಶಿವಾಜಿ ಸೋಮಯ್ಯ ಅವರ ಲೈನ್ ಮನೆಯಲ್ಲಿ ಈ ಕೊಲೆಗಳಾಗಿವೆ.