ಸೋಮವಾರಪೇಟೆ (ಕೊಡಗು): ಆರತಕ್ಷತೆ ಸಮಾರಂಭದಲ್ಲಿ ನವದಂಪತಿ ದೇಹದಾನಕ್ಕೆ ಸಹಿ ಹಾಕಿದ ಅಪರೂಪದ ಘಟನೆ ತಾಲೂಕಿನ ಒಕ್ಕಲಿಗರ ಸಮುದಾಯದಲ್ಲಿ ಇತ್ತೀಚೆಗೆ ನಡೆದಿದೆ.
ಆರತಕ್ಷತೆ ಸಮಾರಂಭದಲ್ಲಿ ದೇಹದಾನಕ್ಕೆ ಸಹಿ ಮಾಡಿದ ದಂಪತಿ..! - ಆರತಕ್ಷತೆ ಸಮಾರಂಭದಲ್ಲಿ ದೇಹದಾನಕ್ಕೆ ಸಹಿ ಮಾಡಿದ ದಂಪತಿ
ನವ ದಂಪತಿ ದೇಹದಾನಕ್ಕೆ ಸಹಿ ಹಾಕಿದ ಅಪರೂಪದ ಘಟನೆ ತಾಲೂಕಿನ ಒಕ್ಕಲಿಗರ ಸಮುದಾಯದಲ್ಲಿ ನಡೆಯಿತು. ಸತ್ತ ಮೇಲೆ ಮಣ್ಣಾಗುವ ದೇಹ ಇನ್ನೊಬ್ಬರ ಬಾಳಿಗೆ ಬೆಳಕಾಗಲಿ ಎಂದು ಈ ನಿರ್ಧಾರ ಮಾಡಿದ ವಧು-ವರ ಇತರರಿಗೆ ಮಾದರಿಯಾಗಿದ್ದಾರೆ.
![ಆರತಕ್ಷತೆ ಸಮಾರಂಭದಲ್ಲಿ ದೇಹದಾನಕ್ಕೆ ಸಹಿ ಮಾಡಿದ ದಂಪತಿ..! somwarpet-couples-signed-for-the-body-donation](https://etvbharatimages.akamaized.net/etvbharat/prod-images/768-512-9490514-thumbnail-3x2-kdkd.jpg)
ದೇಹದಾನಕ್ಕೆ ಸಹಿ ಮಾಡಿದ ದಂಪತಿ.
ದಂಪತಿ ಗೌತಮ್ ಮತ್ತು ಸುಮನಾ ದೇಹದಾನ ಮಾಡಿದ ವಧುವರರು. ಬದುಕಿದ್ದಾಗ ರಕ್ತದಾನ ಮಾಡಬಹುದು. ಆದರೆ ದೇಹ ದಾನ ಮಾಡಲು ಬದುಕಿರುವಾಗಲೇ ನೋಂದಣಿ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ನೇತ್ರದಾನ, ದೇಹದಾನಕ್ಕೆ ಮುಂದಾಗಲಿ. ಆ ಮೂಲಕ ಮರಣದ ನಂತರ ಇನ್ನೊಬ್ಬರ ಬಾಳಿಗೆ ಬೆಳಕು ನೀಡುವಂತಾಗಲಿ ಎಂಬ ಉದ್ದೇಶ ನಮ್ಮದು ಎಂದು ದಂಪತಿ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಕ್ರೀಡಾಪಟು ಗಿರೀಶ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಆಹ್ವಾನಿತರೆಲ್ಲರಿಗೂ ನೇತ್ರದಾನ ಜಾಗೃತಿ, ಸದಸ್ಯತ್ವ ಅಭಿಯಾನ ಮತ್ತು ಪುಸ್ತಕ ನೀಡಿ, ಸಸಿ ವಿತರಿಸಿ ಮಾದರಿಯಾದರು.