ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ, ವಿಡಿಯೋ ​​ - undefined

ಕೊಡಗಿನಲ್ಲಿ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಡಿಲಗೊಂಡಿರುವ ಗುಡ್ಡದ ಮಣ್ಣು ಕುಸಿದಿರುವ ವೀಡಿಯೋ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಕೊಡಗು

By

Published : Jul 21, 2019, 7:28 PM IST

ಕೊಡಗು: ವರುಣನ ಅಬ್ಬರಕ್ಕೆ ಸಡಿಲಗೊಂಡಿದ್ದ ಗುಡ್ಡದ ಮಣ್ಣು ಕುಸಿದಿರುವ ಘಟನೆ ನಗರದ ಹಳೆ ಬಸ್ ನಿಲ್ದಾಣದ ಸಮೀಪ ನಡೆದಿದೆ. ಮಣ್ಣು ಇದ್ದಕ್ಕಿದ್ದಂತೆ ಕುಸಿದು ಸ್ಥಳೀಯರನ್ನು ಆಂತಕಕ್ಕೀಡು ಮಾಡಿದೆ.

ಕಳೆದ ಬಾರಿ ಗುಡ್ಡ ಕುಸಿದು ಬಸ್ ನಿಲ್ದಾಣ ಸ್ಥಳಾಂತರವಾಗಿತ್ತು. ನಂತರ ಪುನಃ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ನಡುವೆಯೂ 2 ನೇ ಬಾರಿಗೆ ಗುಡ್ಡದ ಮಣ್ಣು ಕುಸಿದಿದೆ.‌

ಭಾರಿ ಮಳೆಯಿಂದ ತಡೆಗೋಡೆ ಕುಸಿತ

ಜುಲೈ 19 ರಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 'ರೆಡ್ ಅಲರ್ಟ್' ಘೋಷಿಸಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರದಿಂದ ಇರುವಂತೆ ಮನವಿ ಮಾಡಿತ್ತು.

For All Latest Updates

TAGGED:

ABOUT THE AUTHOR

...view details