ಕೊಡಗು:ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡಾನೆಯೊಂದು ಮನೆ ಮುಂದೆ ಬಂದು ದಾಂಧಲೆ ಮಾಡಿ ಕಾಫಿ ತೋಟಕ್ಕೆ ಹೋಗಿರುವ ಘಟನೆ ಕರಡಿಗೋಡು ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ.
ಓದಿ: ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ‘ಒಡೆಯ’ನಿಗೆ ಅಭಿಮಾನಿಗಳ ಸಾಥ್

ಶಾಂತಿ ಬೋಪ್ಪಣ ಅವರ ಮನೆ ಮುಂದೆ ಕಾಡಾನೆ ಬಂದಿದ್ದ ದೃಶ್ಯಾವಳಿಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಆನೆ ಕಾಫಿ ತೋಟಕ್ಕೆ ದಾಳಿ ಮಾಡಿ ನಂತರ ಮನೆ ಮುಂದೆ ಇದ್ದ ಹೂವಿನ ಗಿಡಗಳನ್ನು ತುಳಿದು ನಾಶಮಾಡಿದೆ.
ಕೆಲವು ದಿನಗಳ ಹಿಂದೆ ನಡೆದ ಪ್ರತ್ಯೇಕ ಘಟನೆಗಳಲ್ಲಿ ಸಿದ್ದಾಪುರ ಭಾಗದಲ್ಲಿ ಇಬ್ಬರನ್ನು ಆನೆ ಕೊಂದಿದ್ದು, ಕಾಫಿ ತೋಟದ ಕಾವಲುಗಾರನೊಬ್ಬನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು.
ಇಂದು ಕರಡಿಗೋಡು ಗ್ರಾಮದ ಕಾಫಿ ತೋಟಕ್ಕೆ ಆನೆ ಲಗ್ಗೆ ಇಟ್ಟಿದ್ದು, ಸುತ್ತಮುತ್ತಲಿನ ಜನ ಭಯಭೀತರಾಗಿದ್ದಾರೆ. ಈ ಒಂಟಿ ಕಾಡಾನೆಯನ್ನು ಕಾಡಿಗೆ ಓಡಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.