ಕೊಡಗು: ವರ್ಷದ ಹಿಂದೆ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದ ಹುಲಿಯ ಕಾಲ್ಬೆರಳಿನ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಮರೂರು ಗ್ರಾಮದ ಗಣೇಶ್, ಯೋಗೇಶ್, ರಮೇಶ್, ನಟೇಶ್ ದೊರೇಶ್, ನವೀನ್, ಶೇಖರ್ ಮತ್ತು ರಮೇಶ್ ಬಂಧಿತ ಆರೋಪಿಗಳು.
ವರ್ಷದ ಹಿಂದೆ ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ತಂತಿ ಬೇಲಿಗೆ ಗಣೇಶ್ ಮತ್ತು ಯೋಗೇಶ್ ವಿದ್ಯುತ್ ಹರಿಸಿದ್ದರು. ಆದರೆ ಕಾಡು ಹಂದಿಗೆ ಇಟ್ಟಿದ್ದ ವಿದ್ಯುತ್ ಹುಲಿಗೆ ತಗುಲಿ ಸ್ಥಳದಲ್ಲಿಯೇ ಅದು ಮೃತಪಟ್ಟಿತ್ತು. ಹುಲಿ ಮೃತಪಟ್ಟಿರುವುದರ ಬಗ್ಗೆ ಯಾರಿಗೂ ಮಾಹಿತಿ ನೀಡದೇ, ಹುಲಿ ಉಗುರು ತೆಗೆದುಕೊಂಡು ಹುಲಿ ಕಾಲ್ಬೆರಳನ್ನು ಹೂತು ಹಾಕಿದ್ದರು. ಅಲ್ಲದೇ ವರ್ಷದ ಬಳಿಕ ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದ್ದಾರೆ.