ಕರ್ನಾಟಕ

karnataka

ETV Bharat / state

ಶನಿವಾರ ಸಂತೆಯಲ್ಲಿ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ, ಹಲವರ ಬಂಧನ - ಕೊಡಗು ಜಿಲ್ಲಾ ಸುದ್ದಿ

ದಲಿತ ಯುವಕನ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

section-144-imposed-in-shanivara-santhe-kodagu
ಶನಿವಾರ ಸಂತೆಯಲ್ಲಿ 144 ಸೆಕ್ಷನ್​ ಜಾರಿ

By

Published : Nov 15, 2021, 6:03 PM IST

ಕೊಡಗು: ಶನಿವಾರ ಸಂತೆಯಲ್ಲಿ ನಿಷೇಧಾಜ್ಞೆ (144 ಸೆಕ್ಷನ್)​ ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದ ಹಿಂದೂ ಪರ ಸಂಘಟನೆಯ 66ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.


ದಲಿತ ಯುವಕರ ಮೇಲೆ ಹಲ್ಲೆ ಖಂಡಿಸಿ ಹಾಗೂ ಆರೋಪಿಗಳ ಮೇಲೆ ದೌರ್ಜನ್ಯ ಪ್ರಕರಣ​ ದಾಖಲಿಸುವಂತೆ ಒತ್ತಾಯಿಸಿ ನಗರದಲ್ಲಿ ಹಿಂದೂ ಸಂಘಟನೆಗಳು ಬಂದ್​ (Shanivarasanthe bandh) ಮಾಡಿದ್ದು ಮುಂಜಾಗೃತಾ ಕ್ರಮವಾಗಿ ಶನಿವಾರ ಸಂತೆಯಲ್ಲಿ (Section 144 imposed in Shanivara santhe) 144 ಸೆಕ್ಷನ್​ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದ ಹಲವರನ್ನು ಬಂಧಿಸಲಾಯಿತು.

ಪ್ರಕರಣದ ಹಿನ್ನೆಲೆ:

ಕಳೆದ ಎರಡು ದಿನಗಳ ಹಿಂದೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರ ಸಂತೆಯ ಗುಡುಗಳಲೆ ಗ್ರಾಮದ ಬಳಿ ಕಾರು ಚಾಲಕನಿಗೆ ಬೈಕ್ ಸವಾರರು ದಾರಿ ಬಿಡಲಿಲ್ಲ ಎಂಬ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಘಟನೆ ಶನಿವಾರ ಸಂತೆ ಪೊಲೀಸ್ ಠಾಣೆ ಮಟ್ಟಿಲೇರಿದೆ‌. ಎರಡು ಕಡೆಯವರ ಮೇಲೂ ಇದೀಗ ಪ್ರಕರಣ ದಾಖಲಾಗಿದೆ. ಆದ್ರೆ ದಲಿತ ಯುವಕನ ಮೇಲೆ ಕೇಸು ದಾಖಲಾಗಿರುವುದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಶನಿವಾರ ಸಂತೆ ಬಂದ್​ಗೆ ಕೆರೆ ನೀಡಿದ್ದವು.

ದಲಿತ ಯವಕರ ಮೇಲೆ ಪೊಲೀಸರು‌ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು. ಹಲ್ಲೆ ಮಾಡಿದವರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಶನಿವಾರಸಂತೆ ಬಂದ್ ಮಾಡಲಾಗಿತ್ತು. ಇಂದಿನ ಬಂದ್ ಬೆಂಬಲಿಸಿ ಸಾಕಷ್ಟು ಸಂಖ್ಯೆಯಲ್ಲಿ ನೆರೆದ ಜನರು ಶನಿವಾರಸಂತೆಯ ಕೆ.ಆರ್.ಸಿ ವೃತ್ತದ ಬಳಿ ಸೇರಿ ಪ್ರತಿಭಟನೆಗೆ ಮುಂದಾಗಿದ್ದರು. ಆದ್ರೆ ಇದಕ್ಕೆ ಪೊಲೀಸರು ಕಡಿವಾಣ ಹಾಕಿದರು. ಶನಿವಾರಸಂತೆಯಲ್ಲಿ 144 ಸೆಕ್ಷನ್ ಜಾರಿಯಾಗಿತ್ತು. ಹೀಗಾಗಿ ಪ್ರತಿಭಟನೆಗೆ ಮುಂದಾದ 60ಕ್ಕೂ ಹೆಚ್ಚು ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ABOUT THE AUTHOR

...view details