ಕರ್ನಾಟಕ

karnataka

By

Published : Aug 10, 2020, 10:48 AM IST

Updated : Aug 10, 2020, 12:33 PM IST

ETV Bharat / state

ಬ್ರಹ್ಮಗಿರಿಯಲ್ಲಿ ಮುಂದುವರೆದ ಶೋಧ ಕಾರ್ಯ: ಮೃತ ಅರ್ಚಕರಿಗೆ ಸೇರಿದ ಮಹತ್ವದ ವಸ್ತುಗಳು ಪತ್ತೆ

ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಅರ್ಚಕ ನಾರಾಯಣ ಆಚಾರ್​ ಅವರಿಗೆ ಸೇರಿದ ಮಹತ್ವದ ವಸ್ತುಗಳು ಪತ್ತೆಯಾಗಿವೆ.

search-operation-in-brahmagiri-of-kodagu
ಮೃತ ಅರ್ಚಕರಿಗೆ ಸೇರಿದ ಮಹತ್ವದ ವಸ್ತುಗಳು ಪತ್ತೆ

ತಲಕಾವೇರಿ (ಕೊಡಗು): ಬ್ರಹ್ಮಗಿರಿ ಬೆಟ್ಟ ಕುಸಿತ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಅರ್ಚಕ ನಾರಾಯಣ ಆಚಾರ್ ಅವರಿಗೆ ಸೇರಿದ ಕೆಲವೊಂದು ಮಹತ್ವದ ಪುಸ್ತಕಗಳು ಪತ್ತೆಯಾಗಿವೆ.

ಶೋಧ ಕಾರ್ಯದ ವೇಳೆ ಪತ್ತೆಯಾದ ವಸ್ತುಗಳು

ಬೆಟ್ಟ ಕುಸಿತ ಸ್ಥಳದಲ್ಲಿ 'ಸಮಾಧಿ‌ ನಿರ್ಣಯ' ಎಂಬ ಪುಸ್ತಕವೊಂದು ದೊರೆತಿದ್ದು, ಎಲ್ಲವೂ ಕೊಚ್ಚಿ ಹೋಗಿದ್ದರೂ ಪುಸ್ತಕ ಮಾತ್ರ ಮನೆ ಇದ್ದ ಜಾಗದಲ್ಲೇ‌ ಇದೆ. ಸಮಾಧಿ ನಿರ್ಣಯ ಪುಸ್ತಕ ಪತ್ತೆಯಾಗಿರುವುದರಿಂದ ನಾರಾಯಣ ಆಚಾರ್ ಅವರಿಗೆ ಅಪಾಯದ ಮುನ್ಸೂಚನೆ ಮೊದಲೇ ತಿಳಿದಿತ್ತಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

ಇಲ್ಲಿ ದೊರೆತಿರುವ ಪುಸ್ತಕದಲ್ಲಿ ಮರಣ ಹೊಂದುವುದು ಹೇಗೆ, ಜೀವನ್ಮುಕ್ತಿ ಪಡೆಯುವುದು ಹೇಗೆ ಎಂಬ ವಿಷಯಗಳಿವೆ.

Last Updated : Aug 10, 2020, 12:33 PM IST

ABOUT THE AUTHOR

...view details