ಕರ್ನಾಟಕ

karnataka

ETV Bharat / state

13 ನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯಾಚರಣೆ: ಇನ್ನೂ ಪತ್ತೆಯಾಗದ ಇಬ್ಬರ ಮೃತದೇಹ - Dead bodies

ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಸಹಾಯಕ ಹಾಗೂ ಅರ್ಚಕ ಶ್ರೀನಿವಾಸ್ ಅವರ ದೇಹ ಈವರೆಗೂ ಪತ್ತೆಯಾಗಿಲ್ಲ.‌ ಈವರೆಗೆ ನಡೆದ ಶೋಧ ಕಾರ್ಯಾಚರಣೆ ವೇಳೆ ನಾರಾಯಣ ಆಚಾರ್, ಆನಂದ ತೀರ್ಥ ಮತ್ತು ರವಿಕಿರಣ್ ಮೃತದೇಹಗಳು ಮಾತ್ರವೇ ದೊರೆತಿವೆ.‌

Search operation for the 13th day for Dead bodies
13 ನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯಾಚರಣೆ

By

Published : Aug 18, 2020, 8:34 AM IST

Updated : Aug 18, 2020, 9:40 AM IST

ತಲಕಾವೇರಿ(ಕೊಡಗು): ಗಜಗಿರಿ ಬೆಟ್ಟ ಕುಸಿದು ಇಂದಿಗೆ 13 ದಿನಗಳು ಕಳೆದಿದ್ದು, ಭೂಕುಸಿತದಲ್ಲಿ ಕಣ್ಮರೆಯಾಗಿರುವ ಇಬ್ಬರಿಗೆ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 12 ದಿನಗಳಿಂದ ನಡೆಯುತ್ತಿರುವ ಶೋಧ ಕಾರ್ಯ ಇನ್ನೂ ನಿಂತಿಲ್ಲ. ಇಲ್ಲಿನ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಸಹಾಯಕ ಹಾಗೂ ಅರ್ಚಕ ಶ್ರೀನಿವಾಸ್ ಅವರ ದೇಹ ಈವರೆಗೂ ಪತ್ತೆಯಾಗಿಲ್ಲ.‌ ಈವರೆಗೆ ನಡೆದ ಶೋಧ ಕಾರ್ಯಾಚರಣೆ ವೇಳೆ ನಾರಾಯಣ ಆಚಾರ್, ಆನಂದತೀರ್ಥ ಮತ್ತು ರವಿಕಿರಣ್ ಮೃತದೇಹಗಳು ದೊರೆತಿವೆ.‌

13 ನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯಾಚರಣೆ

ಇನ್ನುಳಿದ ಈ ಇಬ್ಬರಿಗಾಗಿ ಮೂರು ಹಿಟಾಚಿಗಳನ್ನು ಬಳಸಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳಿಂದ ಹುಡುಕಾಟ ಮುಂದುವರೆದಿದೆ.‌

Last Updated : Aug 18, 2020, 9:40 AM IST

ABOUT THE AUTHOR

...view details