ಕೊಡಗು :ಸಚಿವ ಸಾರಾ ಮಹೇಶ್ ಸಿಎಂ ಸೂಚನೆಯಂತೆ ಚುನಾವಣಾ ಆಯೋಗದ ಅನುಮತಿ ಪಡೆದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಡಗು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಜನರಿಗೆ ಆದಷ್ಟೂ ಬೇಗ ಸೂರು ಕಲ್ಪಿಸುವ ಭರವಸೆ ನೀಡಿದರು. ಇದಕ್ಕೂ ಮುನ್ನ ರೆಸಾರ್ಟ್ ಬಳಿ ಮಾತನಾಡಿದ ಅವರು, ಸಿಎಂ ಖಾಸಗಿ ರೆಸಾರ್ಟ್ ವಾಸ್ತವ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಮನುಷ್ಯ ಪ್ರಾಣಿಗಳಂತೆ ಎಲ್ಲರಿಗೂ ಖಾಸಗಿ ಬದುಕು ಹಾಗೂ ವಿಶ್ರಾಂತಿ ಆಗತ್ಯ. ಅದನ್ನು ಸಿಎಂ ಮಾಡ್ತಿದ್ದಾರೆ ಅಷ್ಟೇ. ಕೊಡಗಿನಲ್ಲಿ ಸಿದ್ದರಾಮಯ್ಯ ಉಳಿದುಕೊಂಡಿದ್ದ ರೆಸಾರ್ಟ್ಗೆ ಸಿಎಂ ಬಂದಿದ್ದು ಕೊಡಗು ಸೇಫ್ ಎಂಬ ಸಂದೇಶ ಸಾರಲು ಅಂತ ಸಮರ್ಥನೆ ನೀಡಿದರು. ಬಿಎಸ್ವೈ ಹೇಳಿಕೆಗೆ ಇದೇ ವೇಳೆ ಟಾಂಗ್ ನೀಡಿ, ಯಡಿಯೂರಪ್ಪ ಹೇಳಿರೋದು ಮೇ 23ರ ನಂತರ ಕೇಂದ್ರ ಸರ್ಕಾರ ಬದಲಾಗುತ್ತೆ ಅಂತ ಎಂದು ವ್ಯಂಗ್ಯವಾಡಿದರು.