ಮಡಿಕೇರಿ: ಜೀವ ನದಿ ಕಾವೇರಿಯ ಪುನಶ್ಚೇತನಕ್ಕೆ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕಾವೇರಿ ಕೂಗು ಹೆಸರಿನ ಅಭಿಯಾನಕ್ಕೆ ಕೊಡಗಿನ ತಲಕಾವೇರಿಯಿಂದ ಇಂದು ಚಾಲನೆ ಸಿಕ್ಕಿದೆ.
ಕಾವೇರಿ ಕೂಗು ಅಭಿಯಾನಕ್ಕೆ ಸ್ಯಾಂಡಲ್‌ವುಡ್ ತಾರೆಯರ ಬೆಂಬಲ - Kodagu
ಜೀವ ನದಿ ಕಾವೇರಿಯ ಪುನಶ್ಚೇತನಕ್ಕೆ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕಾವೇರಿ ಕೂಗು ಹೆಸರಿನ ಅಭಿಯಾನಕ್ಕೆ ಕೊಡಗಿನ ತಲಕಾವೇರಿಯಿಂದ ಚಾಲನೆ ದೊರೆತಿದ್ದು, ಸ್ಯಾಂಡಲ್‌ವುಡ್ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ.
ನದಿಯನ್ನು ಉಳಿಸಲು ಗಿಡಗಳನ್ನು ನೆಡಬೇಕು ಎಂಬ ಧ್ಯೇಯದೊಂದಿಗೆ ಬೈಕ್ ರ್ಯಾಲಿ ಆರಂಭವಾಗಿದ್ದು, ಖುದ್ದು ಬೈಕ್ ರೈಡ್ ಮಾಡುವ ಮೂಲಕ ಸದ್ಗುರು ಗಮನ ಸೆಳೆದರು. ಇನ್ನು ಅಭಿಯಾನಕ್ಕೆ ಸ್ಯಾಂಡಲ್‌ವುಡ್ ತಾರೆಯರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದ್ಗುರುವಿನೊಂದಿಗೆ ಬೈಕ್ ರೈಡ್ ಮಾಡಿದ ನಟರಾದ ದಿಗಂತ್ ಹಾಗೂ ರಕ್ಷಿತ್ ಶೆಟ್ಟಿ ಕಾವೇರಿ ಕೂಗು ಅಭಿಯಾನಕ್ಕೆ ಶುಭ ಹಾರೈಸಿದ್ದಾರೆ. ಕಾವೇರಿ ಕೂಗಿಗೆ ಹಲವಾರು ಉದ್ದೇಶ ಮತ್ತು ಅವಶ್ಯಕತೆ ಇದೆ. ಅದನ್ನು ನಾವು ಅರಿಯಬೇಕು. ಆ ಉದ್ದೇಶಕ್ಕೆ ಸಾಥ್ ನೀಡಲು ಸದ್ಗುರು ಜಗ್ಗಿ ವಾಸುದೇವ ಅವರ ಜೊತೆ ನಾವು ಬಂದಿದ್ದೇವೆ ಎಂದರು.
Either follow a leader or Be the lead ಅನ್ನೋ ಮಾತಿದೆ. ಹಾಗೆಯೇ ನಾವು ಕೂಡ ಸದ್ಗುರು ಅವರನ್ನು ಫಾಲೋ ಮಾಡ್ತಿದಿವಿ. ಕಾವೇರಿ ನೀರು ಸಮೃದ್ಧಿಯಾಗಿ ಇದ್ದರೆ ಮಾತ್ರ ನಮ್ಮ ಬದುಕು ಹಸನಾಗಲು ಸಾಧ್ಯ. ಇದೊಂದು ಒಳ್ಳೆಯ ಅಭಿಯಾನ. ಹಾಗಾಗಿ ಅದರಲ್ಲಿ ತೊಡಗಿಸಿಕೊಂಡು ಬೈಕ್ ರೈಡ್ ಮಾಡ್ತಿದಿವಿ. ನೀವೆಲ್ಲರೂ ನಿಮ್ಮ ಕೈಯಲ್ಲಿ ಎಷ್ಟು ಗಿಡ ಕೊಂಡುಕೊಳ್ಳೋಕೆ ಆಗುತ್ತದೆಯೋ ಅಷ್ಟನ್ನು ಖರೀದಿಸುವುದರೊಂದಿಗೆ ಅವುಗಳನ್ನು ಪೋಷಿಸಿ ಎಂದು ನಾಯಕ ನಟರಾದ ದಿಗಂತ್ ಹಾಗೂ ರಕ್ಷಿತ್ ಶೆಟ್ಟಿ ಕರೆ ನೀಡಿದ್ರು.