ಕೇಂದ್ರದ ರಕ್ಷಣ ಇಲಾಖೆಯ ಕೊಡಗು ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಾರ್ಡ್ ಬಾಯ್ ಮತ್ತು ಕೌನ್ಸೆಲರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 6 ವಾರ್ಡ್ ಬಾಯ್ ಮತ್ತು ಒಬ್ಬರು ಸಮಾಲೋಚಕರ ಆಯ್ಕೆ ನಡೆಸಲಾಗುವುದು. ಮೆಟ್ರಿಕ್ಯೂಲೆಷನ್ ಮತ್ತು ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ.
ಹುದ್ದೆ ವಿವರ: ವಾರ್ಡ್ ಬಾಯ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯೂಲೇಷನ್ ಪಾಸ್ ಆಗಿರಬೇಕು. ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿದ್ದಲ್ಲಿ ಅದು ಪ್ರಯೋಜವಾಗಲಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೋರ್ಸ್ ಅಥವಾ ಇತರೆ ಸರ್ಕಾರಿ ಪ್ರಯೋಜಿತ ಸಂಸ್ಥೆಗಳಿಂದ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಎರಡರಿಂದ ಮೂರು ವರ್ಷ ಅನುಭವ ಹೊಂದಿರಬೇಕಾಗಿದೆ.
ಸಮಾಲೋಚಕರು: ಸೈಕಾಲಾಜಿ ಅಥವಾ ಮಕ್ಕಳ ಅಭಿವೃದ್ಧಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಆಂಗ್ಲ ಮಾಧ್ಯಮದಲ್ಲಿ ಸಮಾಲೋಚನೆ ನೀಡುವ ಅನುಭವ ಹೊಂದಿರಬೇಕು
ವಯೋಮಿತಿ: ವಾರ್ಡ್ಬಾಯ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 50 ವರ್ಷ ವಯೋಮಾನ ಹೊಂದಿರಬೇಕು. ಸಮಾಲೋಚಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 35 ವರ್ಷ ವಯೋಮಿತಿ ಹೊಂದಿರಬೇಕು.
ವೇತನ: ವಾರ್ಡ್ ಬಾಯ್ ಹುದ್ದೆಗಳಿಗೆ 17,600 ರೂ. ವೇತನ ಮತ್ತು ಸಮಾಲೋಚಕರಿಗೆ 34,100 ರೂ. ವೇತನ ನಿಗದಿಸಲಾಗಿದೆ.
ಅರ್ಜಿ ಸಲ್ಲಿಕೆ ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಪೋಸ್ಟಲ್ ಚಾರ್ಜ್ 25 ರೂ ಸಲ್ಲಿಕೆ ಮಾಡಬೇಕು. ಜೊತೆಗೆ ಮೀಸಲಾತಿ ರಹಿತ ಮತ್ತು ಒಬಿಸಿ ಅಭ್ಯರ್ಥಿಗಳು 400 ರೂ. ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಕೆ ಮಾಡಬೇಕಿದೆ.