ಕರ್ನಾಟಕ

karnataka

ETV Bharat / state

ಮಹಿಳೆ ಜೊತೆ ಅಸಭ್ಯ ವರ್ತನೆ: ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ - ಮನೆ ಮಾಲೀಕ ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮಾಲೀಕ ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾರೆ ಎನ್ನುವ ಆರೋಪ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.

rude-behavior
ಕೆ.ಎಸ್.ಖಾದರ್ ಹಾಜಿ

By

Published : Feb 18, 2020, 11:03 AM IST

ಕೊಡಗು:ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಮನೆ ಮಾಲೀಕನೊಬ್ಬ ಮನೆಯಲ್ಲಿ ಯಾರೂ ಇಲ್ಲದಿರುವಾಗ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಮಹಿಳೆ ಜೊತೆ ಅಸಭ್ಯ ವರ್ತನೆ

ಗ್ರಾಮದ ಜಮಾತ್ ಅಧ್ಯಕ್ಷ ಕೆ.ಎಸ್.ಖಾದರ್ ಹಾಜಿ ಎಂಬಾತನ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ಖಾದರ್​ನ ಹೆಂಡತಿ ಮನೆಯಲ್ಲಿ ಬಾಡಿಗೆ ಇದ್ದ ಮಹಿಳೆಗೆ ಗಂಡನಿಗೆ ಊಟ ಕೊಡುವಂತೆ ಹೇಳಿದ್ದಾರೆ.

ಅಂದರಂತೆ ಊಟ ಕೊಡಲು ಹೋದ ಸಂದರ್ಭದಲ್ಲಿ ಖಾದರ್ ‌ಆಕೆಯ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details