ಕರ್ನಾಟಕ

karnataka

ಭೂಮಿ ಕಂಪಿಸಿದ ಭಾಗದಿಂದ 4 ಕಿ.ಮೀ ದೂರದಲ್ಲಿ ರಸ್ತೆ ಮೇಲೆ ಬಿದ್ದ ಬಂಡೆಗಲ್ಲು

By

Published : Jul 5, 2022, 2:08 PM IST

ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಭಾಗದಿಂದ 4 ಕಿ.ಮೀ ದೂರದಲ್ಲಿ ಉರುಳಿಬಿದ್ದ ಬಂಡೆಗಲ್ಲು- ತಲಕಾವೇರಿ ರಸ್ತೆಯಲ್ಲಿ ಘಟನೆ-ಜನರಲ್ಲಿ ಹೆಚ್ಚಿದ ಆತಂಕ

rock fell on road in kodagu
ಭೂಮಿ ಕಂಪಿಸಿದ ಭಾಗದಿಂದ 4.ಕಿಮಿ ದೂರದಲ್ಲಿ ರಸ್ತೆ ಮೇಲೆ ಬಿದ್ದ ಬಂಡೆಗಲ್ಲು

ಕೊಡಗು:ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಭಾಗದಿಂದ 4 ಕಿಲೋ ಮೀಟರ್​ ದೂರದಲ್ಲಿ ಬಂಡೆಗಲ್ಲು ಉರುಳಿ ರಸ್ತೆ ಮೇಲೆ ಬಿದ್ದಿದೆ. ಇದೀಗ ಜನರಲ್ಲಿ ಆತಂಕ ಶುರವಾಗಿದೆ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮ ತಲಕಾವೇರಿಗೆ ಹೋಗುವ ರಸ್ತೆಯಲ್ಲಿ ಬಂಡೆ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಭಾಗಮಂಡಲ ಭಾಗದಲ್ಲಿ ಮಳೆ ಕಡಿಮೆಯಾದ್ರು ಕಾವೇರಿ ನದಿ ಮಾತ್ರ ಉಕ್ಕಿ ಹರಿಯುತ್ತಿದೆ. ನಾಪೋಕ್ಲು ಭಾಗದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ನಾಪೋಕ್ಲು ಹೋಗುವ ರಸ್ತೆ ಮುಳುಗುವ ಹಂತಕ್ಕೆ ತಲುಪಿದ್ದು, ಇದರಿಂದ ಕೂಲಿ‌‌ಕಾರ್ಮಿಕರು, ಶಾಲ‌ಮಕ್ಕಳು ಮತ್ತು ಸ್ಥಳೀಯರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಕಾವೇರಿ ನದಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ತೀರ ಪ್ರದೇಶದಲ್ಲಿ ವಾಸಮಾಡುವ ಜನರಲ್ಲಿ ಆತಂಕ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು, ಹಾರಂಗಿ ಡ್ಯಾಂಗೆ ಒಳಹರಿವು ಪ್ರಮಾಣ ಹೆಚ್ಚಾಗಿದೆ. 9497ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಡ್ಯಾಂ ನಿಂದ 1200 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕೆ ಆರ್ ಎಸ್ ಅಣೆಕಟ್ಟೆಗೆ ನೀರು ಹೆಚ್ಚು ಸಂಗ್ರಹವಾಗುತ್ತಿದ್ದು, ತುಂಬುವ ಹಂತಕ್ಕೆ ತಲುಪಿದೆ.

ಇದನ್ನೂ ಓದಿ:'ಮಹಾ' ಮಳೆಗೆ ಜನಜೀವನ ಅಸ್ತವ್ಯಸ್ತ; ಮುಂಬೈ ನಗರಿಯಲ್ಲಿ ಜನರ ಪರದಾಟ

ABOUT THE AUTHOR

...view details