ವಿರಾಜಪೇಟೆ (ಕೊಡಗು): ನಿದ್ರೆ ಮಾಡಿದವರನ್ನು ಎಚ್ಚರಿಸಬಹುದು ಆದ್ರೆ ನಿದ್ರಿಸಿದಂತೆ ನಟನೆ ಮಾಡುತ್ತಿರುವ ಚೀನಾವನ್ನು ಎಚ್ಚರಿಸಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಚೀನಾಗೆ ಇಷ್ಟವಿಲ್ಲ ಎಂದು ನಿವೃತ್ತ ಸೇನಾನಿ ಮೇಜರ್ ನಂಜಪ್ಪ ತಿಳಿಸಿದ್ದಾರೆ.
ಚೀನಾ ವಿಸ್ತರಣಾ ಮನೋಭಾವ ಹೊಂದಿದೆ: ನಿವೃತ್ತ ಸೇನಾನಿ ಮೇಜರ್ ನಂಜಪ್ಪ - ಕೊಡಗು ಸುದ್ದಿ
ಚೀನಾ ವಿಸ್ತಾರಣಾ ನೀತಿಯ ಮನೋಭಾವ ಹೊಂದಿದೆ. ಆದರೆ ಭಾರತಕ್ಕೆ ಆ ರೀತಿಯ ದಾಹ ಇಲ್ಲ ಎಂದು ನಿವೃತ್ತ ಸೇನಾನಿ ಮೇಜರ್ ನಂಜಪ್ಪ ಹೇಳಿದರು.
ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿರುವ ಅವರು, ಚೀನಾ ವಿಸ್ತಾರಣಾ ನೀತಿಯ ಮನೋಭಾವ ಹೊಂದಿದೆ. ಆದರೆ ಭಾರತಕ್ಕೆ ಆ ರೀತಿಯ ದಾಹ ಇಲ್ಲ. ಭಾರತದ ಜೊತೆ ಪ್ರತೀಕಾರ ತೀರಿಸಿಕೊಳ್ಳಲು ಚೀನಾ ನೆರೆಯ ಪಾಕಿಸ್ತಾನ, ಭೂತಾನ್, ಮಾಲ್ಡೀವ್ಸ್, ನೇಪಾಳ ಹಾಗೂ ಶ್ರೀಲಂಕಾ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಆದರೆ ಪ್ರಧಾನಿ ಮೋದಿ ಕೂಡಾ ಆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು ಎಂದು ಹೇಳಿದರು.
ವಿಶ್ವಕ್ಕೆ ಕೊರೊನಾ ವೈರಸ್ ಹರಡಿಸಿರುವ ಚೀನಾ ರಾಷ್ಟ್ರದ ಗಮನವನ್ನು ಬೇರೆಡೆ ಸೆಳೆಯಲು ಇಂತಹದ್ದೊಂದು ನಾಟಕವನ್ನು ಪ್ರಾರಂಭಿಸಿದೆ. ಎಲ್‌ಎಸಿ ಗಡಿ ಪ್ರಶ್ನಿಸುವ ಹಕ್ಕು ಚೀನಾಕ್ಕೆ ಇಲ್ಲ. ಎರಡೂ ದೇಶಗಳು ಬೇಕಾದ ರಸ್ತೆ ಮಾರ್ಗಗಳನ್ನು ಮಾಡಿಕೊಳ್ಳುತ್ತಿವೆ. ತೋರಿಕೆಗೋಸ್ಕರ ಚೀನಾ ಹೀಗೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.