ಕೊಡಗು:ನಾಡಿನ ದೊರೆ ಬರ್ತಾರೆ. ಬಂದು ನಮ್ಮ ಸಮಸ್ಯೆ ಆಲಿಸಿ ನಮಗೊಂದು ಶಾಶ್ವತ ಪರಿಹಾರ ನೀಡ್ತಾರೆ ಅಂತ ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿರುವ ನಿರಾಶ್ರಿತರು ಕಾದಿದ್ಧೇ ಬಂತು. ಆದರೆ ಸಿಎಂ ಮಾತ್ರ ಅಧಿಕಾರಿಗಳೊಂದಿಗೆ ಸಭೆ ಮಾಡಿ ಬಳಿಕ ಸಂತ್ರಸ್ತರ ಕೇಂದ್ರವನ್ನು ಭೇಟಿ ಮಾಡಿ ವಾಪಾಸ್ ಆಗಿದ್ದಾರೆ. ಹೀಗಾಗಿ ತಮ್ಮ ಊರುಗಳಿಗೂ ಬರುತ್ತಾರೆ ಎಂದು ಕಾದಿದ್ದ ಪ್ರವಾಹ ಪೀಡಿತ ನಿರಾಶ್ರಿತರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಟಾಚಾರಕ್ಕೆ ಬಂದು ಹೋದ್ರು ಸಿಎಂ ಅಂತಾ ನೆರೆ ಸಂತ್ರಸ್ತರ ಅಸಮಾಧಾನ - ಸಿಎಂ ವಿರುದ್ಧ ಆಕ್ರೋಶ
ತಮ್ಮ ಊರುಗಳಿಗೂ ಬರುತ್ತಾರೆ ಎಂದು ಕಾದಿದ್ದ ಪ್ರವಾಹ ಪೀಡಿತ ನಿರಾಶ್ರಿತರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆಯಿಂದಲೂ ಸಿಎಂ ಊರಿಗೆ ಬರುತ್ತಾರೆ, ಬಂದು ನಮ್ಮ ಸಮಸ್ಯೆಗಳನ್ನು ಆಲಿಸಿ ನಮಗೊಂದು ಸಾಂತ್ವನದ ಮಾತು ಹೇಳ್ತಾರೆ ಅಂತ ಕಾದು ಕುಳಿತಿದ್ದರು. ಆದರೆ ಸಿಎಂ ಮಾತ್ರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲೇ ಇಲ್ಲ. ಬದಲಾಗಿ ಕಾಟಾಚಾರಕ್ಕೆ ಎಂಬಂತೆ ನೆಲ್ಯಹುದಿಕೇರಿಯ ಸಂತ್ರಸ್ತರನ್ನು ಭೇಟಿ ಮಾಡಿ ವಾಪಸ್ ಆಗಿದ್ದಾರೆ.
ಅವರಿಗೆ ಶಾಶ್ವತ ಪರಿಹಾರ ನೀಡುತ್ತೇವೆ. ಈಗಾಗಲೇ ಸರ್ಕಾರಿ ಜಾಗಗಳನ್ನು ಗುರುತಿಸಿದ್ದೇವೆ. ಶೆಡ್ ಹಾಕಿಕೊಳ್ಳುವವರಿಗೆ 50 ಸಾವಿರ ಕೊಡುತ್ತೇವೆ. ಬಾಡಿಗೆ ಮನೆಗಳಿಗೆ ಹೋಗುವವರಿಗೆ ತಿಂಗಳಿಗೆ 5 ಸಾವಿರ ಕೊಡುತ್ತೇವೆ ಅಂತ ಹೇಳಿ ಅಲ್ಲಿಂದ ಹೊರಟ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.